ಶ್ರೀಮಂತರ ಹಿಡಿತದಿಂದ ತಪ್ಪಿಸಿ ಬಡ ಮುಸ್ಲಿಮರ ಪರವಾಗಿ ಈ ವಕ್ಫ್ ಕಾಯ್ದೆ ಇದೆ: ಕೋಟ ಶ್ರೀನಿವಾಸ ಪೂಜಾರಿ

0
Spread the love

ಉಡುಪಿ: ಶ್ರೀಮಂತರ ಹಿಡಿತದಿಂದ ತಪ್ಪಿಸಿ ಬಡ ಮುಸ್ಲಿಮರ ಪರವಾಗಿ ಈ ವಕ್ಫ್ ಕಾಯ್ದೆ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎರಡು ಲಕ್ಷ ಕೋಟಿ ರೂಪಾಯಿ ವಕ್ಫ್ ಆಸ್ತಿ ಶ್ರೀಮಂತ ರಾಜಕಾರಣಿಗಳ ಪಾಲಾಗಿದೆ. ಶ್ರೀಮಂತ ರಾಜಕಾರಣಿಗಳು ಮೆಡಿಕಲ್ ಕಾಲೇಜು, ಶಾಲೆ ಆಸ್ಪತ್ರೆ-ವಾಣಿಜ್ಯ ವ್ಯವಹಾರಗಳನ್ನು ಮಾಡುತ್ತಿದ್ದಾರೆ.

Advertisement

ಕಡಿಮೆ ಬೆಲೆಗೆ ಬಾಡಿಗೆ ಅಥವಾ ಲೀಸ್‌ಗೆ ಪಡೆದು ಎರಡು ಲಕ್ಷ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದವರು ಈ ಮಾಹಿತಿಯನ್ನು ನೀಡುತ್ತಿದ್ದಾರೆ. ಬಡವರು, ಮಹಿಳೆಯರಿಗೆ ಮಕ್ಕಳ ಶಿಕ್ಷಣಕ್ಕೆ ವಕ್ಫ್ ಆಸ್ತಿ ಬಳಕೆಯಾಗಬೇಕು.

ಶ್ರೀಮಂತರ ಹಿಡಿತದಿಂದ ತಪ್ಪಿಸಿ ಬಡ ಮುಸ್ಲಿಮರ ಪರವಾಗಿ ಈ ಕಾಯ್ದೆ ಇದೆ. ಮತೀಯ ಮತ್ತು ಮತದ ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಕ್ಫ್ ಕಾಯ್ದೆಯನ್ನು ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು ಎಂದು ವಿನಂತಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here