ಅಂಬೇಡ್ಕರರಿಗೆ ಅವಮಾನ ಮಾಡಿದವರಿಗೆ ಶಿಕ್ಷೆಯಾಗಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ ಶಾ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲು ಹಾಗೂ ಬೆಳಗಾವಿ ಸುವರ್ಣಸೌಧದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರರಿಗೆ ಅವಹೇಳನಕಾರಿಯಾಗಿ ಮಾತನಾಡಿದ ಸಿ.ಟಿ. ರವಿಯವರನ್ನು ವಿಧಾನಪರಿಷತ್ ಸ್ಥಾನದಿಂದ ಕೈಬಿಟ್ಟು, ಈ ಇಬ್ಬರು ಮುಖಂಡರಿಗೆ ಸೂಕ್ತ ಕಾನೂನು ಶಿಕ್ಷೆ ನೀಡಲು ಒತ್ತಾಯಿಸಿ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

Advertisement

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಸುಮಂಗಲಾ ಗದಗ, ವಿಜಯಲಕ್ಷಿö್ಮÃ ಚಲವಾದಿ, ಜನ್ನೂಬಿ ಹಣಗಿ ಮಾತನಾಡಿದರು. ಹೋರಾಟದಲ್ಲಿ ಸುಶೀಲಾ ಚಲವಾದಿ, ಅನ್ನಪೂರ್ಣ ಸಾಲಿಮಠ, ಸುಮಂಗಲಾ ಗದಗ, ಶೈಲಜಾ ಕೊಂಕಲ್, ಮಹೇಶ ಹಿರೇಮಠ, ಮಾರುತಿ ಚಿಟಗಿ, ದೇವಪ್ಪ ಕಲ್ಮನಿ, ಮುತ್ತಪ್ಪ ಚಲವಾದಿ, ಜಯಶ್ರೀ ರಾಮನಗೌಡರ, ಈರಮ್ಮ ಸಂಗಟಿ, ಶೋಭಾ ಶಿರನಳ್ಳಿ,  ಮಂಜುಳಾ ಚಲವಾದಿ, ರೇಖಾ ಆಲಂನವ್ವ ಪ್ರೇಮಾ ಪೂಜಾರ, ನರಸಮ್ಮ, ಎಸ್.ಡಿ. ಪೂಜಾರ, ಎಸ್.ಆರ್. ಅಂಗಡಿ, ರೇಣುಕಾ ತಳವಾರ, ಸವಿತಾ, ಕಲ್ಯಾಣಿ, ಜಯಶ್ರೀ ಹಿರೇಗೌಡರ, ಬಿ.ಬಿ. ಗೌಡಪ್ಪನವರ, ಅಕ್ಕಮ್ಮ ನಿರ್ಲೊಟ್ಟಿ, ಶೈಲಾ ರೊಡ್ಡನವರ, ಗಂಗಾ ಹರ್ತಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here