ಸಮೀರ್ ಮುಲ್ಲಾನ ವಿಡಿಯೋ ಶೇರ್ ಮಾಡಿದವರು ದೀಪ ಹಚ್ಚಿ ಕ್ಷಮೆ ಕೇಳಿ: ಸೂಲಿಬೆಲೆ!

0
Spread the love

ಬೆಂಗಳೂರು:- ಸಮೀರ್ ಮುಲ್ಲಾನ ವಿಡಿಯೋ ಶೇರ್ ಮಾಡಿದವರು ಅಣ್ಣಪ್ಪನ ನೆನೆದು ದೀಪ ಹಚ್ಚಿ ಕ್ಷಮೆ ಕೇಳಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಇಂದು ವಿಜಯೋತ್ಸವದ ದಿನ, ಸುಳ್ಳುಗಳನ್ನೇ ಸತ್ಯ ಎಂದು ಎಲ್ಲರೂ ಅಂದುಕೊಂಡಿದ್ರು. ನಾನು ಈ ಪ್ರಕರಣದಲ್ಲಿ ವಿಚಾರ ಮಾಡದೇ ಬಂದಿಲ್ಲ. ಯಾವುದು ಸತ್ಯ ಅಂತ ತಿಳಿದೇ ಮೇಲೆಯೇ ಹೋರಾಟ ಮಾಡಿದ್ದು. ಸಮೀರ್ ಮುಲ್ಲಾನ ವಿಡಿಯೋಗಳನ್ನ ಗೊತ್ತಿಲ್ಲದೇ ಶೇರ್ ಮಾಡಿರ್ತೀರಾ. ಆದ್ದರಿಂದ ಮನೆಗೆ ಹೋಗಿ ಅಣ್ಣಪ್ಪನ ನೆನೆದು ದೀಪ ಹಚ್ಚಿ ಕ್ಷಮೆ‌ ಕೇಳೋಣ ಅಂದ್ರು.

ಇನ್ನೂ ಸಮೀರ್ ಮುಲ್ಲಾನಿಂದ ಮಾಸ್ ಮೈಂಡ್ ವಾಷ್ ಆಗಿತ್ತು. ಆನೆ ಮಾವುತನ ಜಾಗ ಎಷ್ಟು? ಅಂತ ಆರೋಪ ಮಾಡೋರಿಗೆ ಗೊತ್ತಿಲ್ಲ. ಎರಡು ಸಾವಿರ ಅಡಿ ಜಾಗಕ್ಕೆ ಖಾವಂದರು ಕೊಲೆ ಮಾಡ್ತಾರಾ? ಚಕ್ರವರ್ತಿ ಸೂಲಿಬೆಲೆ ಉಜಿರೆಗೆ ಬಂದ್ರೇ ಚಪ್ಪಲಿಯಲ್ಲಿ ಹೊಡೀತಿನಿ ಎಂದು ಮಹೇಶ್ ಶೆಟ್ಟಿ ತಿಮರೊಡ್ಡಿ ಹೇಳಿದ್ದ. ಆದ್ರೇ ನಾವು ಉಜಿರೆಯ ತಿಮರೊಡ್ಡಿ ಮನೆ ಬಳಿಯೇ ಸಮಾವೇಶ ಮಾಡಿದ್ವಿ. ಧರ್ಮಸ್ಥಳದ ಆಟೋ ಚಾಲಕರು ನಮ್ಮಬೆಂಬಲಕ್ಕೆ ನಿಂತಿದ್ರು.

ಜಡ್ಜ್ ವಿರೇಂದ್ರ ಹೆಗಡೆ ಚೇಲಾ ಅಂತ ಆರೋಪ ಮಾಡಿದ್ರು. ಆದ್ರೆ ಸರ್ಕಾರ ಅಂಥವರ ವಿರುದ್ಧ ಕ್ರಮ ಕೈಗೊಂಡಿಲ್ವಲ್ಲ. ಸೌಜನ್ಯಳಿಗೆ ನ್ಯಾಯ ಕೊಡಿಸೋದು ಇವರಿಗೆ ಬೇಕಿಲ್ಲ. ಜೇಬಲ್ಲಿ ಸಾಕ್ಷಿ ಇಟ್ಟುಕೊಂಡು ಯಾಕೆ ಓಡಾಡ್ತೀರಿ? ಯಾಕೆ ಅಂದ್ರೆ ಸೌಜನ್ಯ ಹೋರಾಟಕ್ಕೆ ನ್ಯಾಯ ಬೇಕಿಲ್ಲ ಇವರಿಗೆ, ಜೈನ ಸಮುದಾಯದವರು ಗೌಡ ಸಮುದಾಯದ ಸೌಜನ್ಯಳ ರೇಪ್ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ರು. ನಿಶ್ಚಲ್ ಜೈನ್ ಅಮೆರಿಕದಿಂದ ರೇಪ್ ಮಾಡೋಕೆ ಧರ್ಮಸ್ಥಳಕ್ಕೆ ಬಂದ್ರು ಅಂದ್ರು. ಆರೋಪ ಸುಳ್ಳು ಅಂತ ಸಾಬೀತಾದ್ರೂ ಓ ಅವ್ರು ದೊಡ್ಡ ಮನುಷ್ಯರು ಅದಕ್ಕೆ ಅಂದ್ರು. ಸಾಕ್ಷ್ಯ ಕೊಟ್ರೂ ಓ ಅವರು ದೊಡ್ಡೋರು ಅಂತಾರೆ.

ಸುಜಾತ ಭಟ್ ರನ್ನ ವಿರೇಂದ್ರ ಹೆಗಡೆ ತಮ್ಮ ರೇಪ್ ಮಾಡಿದ್ರು ಅಂಥ ನಿನ್ನೆ ಹೊಸ ಕಥೆ ಕಟ್ಟಿದ್ರು. ಏನ್ ಹೇಳೋದು ಇಂತವರಿಗೆ. ನಾನು ಅಯೋಗ್ಯ ಅಂತ ಪದ ಬಳಕೆ‌ ಮಾಡಿದ್ದಕ್ಕೆ ನನ್ನನ್ನ ಸುಪ್ರೀಂ ವರೆಗೆ ಎಳೆದ್ರು. ಸುಪ್ರೀಂ ಕೋರ್ಟ್ ಅಯೋಗ್ಯ ಪದ ಜಾತಿ‌ನಿಂದನೆ ಅಲ್ಲ ಅಂತ ಹೇಳಿದೆ. ಇನ್ಮೇಲೆ ನಾನು ಅಯೋಗ್ಯ ಪದ ಬಳಕೆಗೆ ಯಾವುದೇ ಅಡತಡೆಯಿಲ್ಲದೇ ಬಳಸಬಹುದು ಎಂದರು.


Spread the love

LEAVE A REPLY

Please enter your comment!
Please enter your name here