ಕಮ್ಯುನಿಸ್ಟ್ ಪಡೆಗಳ ಬೆದರಿಕೆ: ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ!

0
Spread the love

ಸಿಯೋಲ್: ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳ ಬೆದರಿಕೆ ಹಿನ್ನೆಲೆ ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

Advertisement

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಇಂದು ರಾತ್ರಿ ದೂರದರ್ಶನ ಭಾಷಣದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಘೋಷಣೆ ಮಾಡುವುದಾಗಿ ಪ್ರಕಟಿಸಿದರು.

ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ತುರ್ತು ಸಮರ ಕಾನೂನನ್ನು ಘೋಷಿಸುತ್ತೇನೆ ಎಂದು ಯೂನ್ ಸುಕ್ ಯೆಲ್ ಹೇಳಿದ್ದಾರೆ.

ಇನ್ನೂ ದಕ್ಷಿಣ ಕೊರಿಯಾದಲ್ಲಿ 1980 ರ ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ಮಿಲಿಟರಿ ಆಡಳಿತದ ಸಮಯದಲ್ಲಿ ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಮಾಧ್ಯಮಗಳು ಮಿಲಿಟರಿ ನಿಯಂತ್ರಣದಲ್ಲಿರುತ್ತಾರೆ ಎಂದು ವರದಿಯಾಗಿದೆ. ಈಗಾಗಲೇ ಮಿಲಿಟರಿ ಆಡಳಿತದ ವಿರುದ್ದ ಜನರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

ಪ್ರಪಂಚದ ಪ್ರಮುಖ ವಾಣಿಜ್ಯ ದೇಶವಾಗಿರುವ ದಕ್ಷಿಣಕೊರಿಯಾದಲ್ಲಿ ಮಿಲಿಟರಿ ಆಡಳಿತ ಹೇರಿಕೆಯಾಗಿರುವುದು ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ.


Spread the love

LEAVE A REPLY

Please enter your comment!
Please enter your name here