ಹುಬ್ಬಳ್ಳಿ ನಗರದ ಕೋಟಿಲಿಂಗೇಶ್ವರ ನಗರದ ನಿವಾಸಿ ನಿಖಿಲ್ ಕುಂದಗೋಳ(27) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕೇಶ್ವಾಪುರ ಠಾಣೆಯ ಇನ್ಸ್ಪೆಕ್ಟರ್, ಎಎಸ್ಐ ಸೇರಿ ಎಂಟು ಮಂದಿ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್ಪೆಕ್ಟರ್ ಯು.ಎಚ್. ಸಾತೇನಹಳ್ಳಿ, ಎಎಸ್ಐ ಜಯಶ್ರೀ ಚಲವಾದಿ,
Advertisement
ಕೇಶ್ವಾಪುರ ಆಂಜನೇಯ ಬಡಾವಣೆಯ ಪ್ರೀತಿ ಪೊಗಳಾಪುರ, ಧನರಾಜ, ಮಂಜುಳಾ, ಆನಂದಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ನಿಖಿಲ್ ಅವರ ತಾಯಿ ಗೀತಾ ಕುಂದಗೋಳ ದೂರು ನೀಡಿದ್ದಾರೆ.‘ನಿಖಿಲ್ ಆತ್ಮಹತ್ಯೆಗೆ ಅವನ ಪತ್ನಿ ಕುಟುಂಬದವರು ಹಾಗೂ ಕೇಶ್ವಾಪುರ ಠಾಣೆ ಇನ್ಸ್ಪೆಕ್ಟರ್ ಮತ್ತು ಎಎಸ್ಐ ಕಾರಣ. ಗುರುವಾರ ತಡರಾತ್ರಿ ಮಗನಿಗೆ ನೋಟಿಸ್ ನೀಡಿ, ದೌರ್ಜನ್ಯ ಎಸಗಿದ್ದರು’ ಎಂದು ನಿಖಿಲ್ ಕುಟುಂಬದವರು ಶುಕ್ರವಾರ ಕಿಮ್ಸ್ ಶವಾಗಾರದ ಎದುರು ಪ್ರತಿಭಟನೆ ನಡೆಸಿ ಆರೋಪಿಸಿದ್ದರು.