ಬೆಂಗಳೂರು: ಸ್ನೇಹಿತನ ಜೊತೆಗೂಡಿ ಪರಿಚಯವಿದ್ದ ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿದ ಆರೋಪದ ಹಿನ್ನಲೆ ಆರ್ಟಿಐ (RTI) ಕಾರ್ಯಕರ್ತ ಶ್ರೀನಿವಾಸ್ ಎಂಬಾತನನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು(Kadugodi Police Station) ಬಂಧಿಸಿದ್ದಾರೆ
Advertisement
ಜುಲೈ 01 ರಂದು ಕಾಡುಗೋಡಿ ಮೆಟ್ರೋ ಸ್ಟೇಷನ್ ಬಳಿ ಶ್ರೀನಿವಾಸ್ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಗೆ ಮಹಿಳೆ ನೀಡಿದ ದೂರಿನ ಮೇರೆಗೆ ಇಂದು(ಗುರುವಾರ) ಶ್ರೀನಿವಾಸ್ನನ್ನು ಬಂಧಿಸಲಾಗಿದೆ. ಈ ಹಿಂದೆ ಇತ ಕೆಆರ್ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಇದೀಗ ಆತನ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.