ಬೆಂಗಳೂರು: ಬೆಂಗಳೂರಿಗೆ ನಕಲಿ ಸಿಗರೇಟ್ ಡಿಸ್ಟ್ರಿಬ್ಯೂಟ್ ಮಾಡ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೆಎಸ್ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಶಾಂತ್, ಶಕೀಲ್, ಶಬ್ಬೀರ್ ಬಂಧಿತ ಆರೋಪಿಗಳಾಗಿದ್ದು, ಲಕ್ಷಾಂತರ ರೂ. ಮೌಲ್ಯದ ನಕಲಿ ಸಿಗರೇಟ್ಸ್ ಸೀಜ್ ಮಾಡಲಾಗಿದೆ.
Advertisement
ಕಾಂಬೋಡಿಯಾ, ಬಾಂಗ್ಲಾದೇಶ ಮೂಲಕ ನಕಲಿ ಸಿಗರೇಟ್ಸ್ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದರು. ನಕಲಿ ಸಿಗರೆಟ್ ಮಾರಾಟ ಬಗ್ಗೆ ಕಂಪನಿ ಪ್ರತಿನಿಧಿ ದೂರು ನೀಡಿದ್ದರು.
ದೂರು ಆಧರಿಸಿ ತನಿಖೆ ನಡೆಸಿದಾಗ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿ ಶಕೀಲ್ ನಕಲಿ ಸಿಗರೇಟ್ ಜಾಲದ ಕಿಂಗ್ ಪಿನ್ ಎಂದು ತಿಳಿದು ಬಂದಿದೆ. ಇನ್ನೂ ಆರೋಪಿಗಳ ವಿರುದ್ಧ ಕೆಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.