ನೆಲಮಂಗಲ:– ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಹಸುಗಳ ಕತ್ತು ಕೊಯ್ದು ರಸ್ತೆಯಲ್ಲಿ ಬಿಸಾಡಿದ್ದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
Advertisement
ಇಮ್ರಾನ್, ಸೈಯದ್ ನವಾಜ್, ಬಂಧಿತರು. ಮತ್ತೋರ್ವ ಆರೋಪಿಯ ಹೆಸರು ಬಹಿಂಗಪಡಿಸಿಲ್ಲ. ಆರೋಪಿಗಳು ಇತ್ತೀಚೆಗೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಸೇತುವೆ ಮೇಲೆ 2 ನಾಟಿ ಹಸುಗಳ ಕತ್ತು ಕೊಯ್ದು ಬಿಸಾಡಿದ್ದರು. ಈ ಪ್ರಕರಣದ ಬಗ್ಗೆ ಸದನದಲ್ಲೂ ಚರ್ಚೆ ಆಗಿತ್ತು. ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು, ಕೇರಳಕ್ಕೆ ಹಸುಗಳನ್ನ ಸಾಗಿಸುತ್ತಿದ್ದ ಗ್ಯಾಂಗ್‍ನ ಮೂವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಹತ್ಯೆಯಾದ ಹಸುಗಳ ಮಾಂಸ ತಿನ್ನಲು ಯೋಗ್ಯವಲ್ಲದ ಕಾರಣ ಆರೋಪಿಗಳು ಕೊಂದು ಬಿಸಾಡಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.