ವಿಜಯನಗರ:- ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದ ಕೆರೆಯೊಂದರಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ಸಾವನ್ನಪ್ಪಿದ ದಾರುಣ ಘಟನೆ ಜರುಗಿದೆ.
Advertisement
ಇದೇ ಗ್ರಾಮದ 14 ವರ್ಷದ ಸಾಗರ್, 14 ವರ್ಷದ ಗುರು, 11 ವರ್ಷದ ವಿನಯ್ ಮೃತ ಬಾಲಕರು ಎಂದು ತಿಳಿದು ಬಂದಿದೆ.
ದಸರಾ ರಜೆ ಹಿನ್ನೆಲೆಯಲ್ಲಿ ಮೂವರು ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಇತ್ತ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ವಿಜಯನಗರ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹಾಗೂ ಡಿವೈಎಸ್ ಪಿ. ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ದೊಡ್ಡಣ್ಣ ಹಾಗೂ ಪಿಎಸ್ ಐ ಸಿದ್ದರಾಮ ಬಿದರಾಣಿ ಭೇಟಿ ನೀಡಿ ಪರಿಶೀಲಿಸಿದರು.