ಕಾರು ನಿಯಂತ್ರಣ ತಪ್ಪಿ ಕಲ್ಲಿನ ಕಂಬಗಳಿಗೆ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು.!

0
Spread the love

ಕಲಬುರಗಿ: ಕಾರು ನಿಯಂತ್ರಣ ತಪ್ಪಿ ಕಲ್ಲಿನ ಕಂಬಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಕಲಬುರಗಿಯ ಅಫಜಲಪುರ ತಾಲೂಕಿನ ಗೊಬ್ಬೂರು ಗ್ರಾಮದ ಬಳಿ ನಡೆದಿದೆ. ಆಯೇಷಾ(70), ಅಜ್ಮೇರಾ(30), ಜೈನಬ್(2) ಮೃತ ದುರ್ದೈವಿಗಳಾಗಿದ್ದು,

Advertisement

ಸಂಬಂಧಿಕರ ಮಗುವಿನ ಜಾವಳ ಕಾರ್ಯಕ್ರಮಕ್ಕೆ ಟವೆರಾ ಕಾರಿನಲ್ಲಿ ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಿಲ್ಲತ್ ನಗರದಿಂದ ಹೊರಟಿದ್ದ ಕಾರು ಗೊಬ್ಬೂರು ಬಳಿ ಬರುತ್ತಿದ್ದಂತೆಯೇ ನಾಯಿ ಅಡ್ಡ ಬಂದಿದೆ.

ಈ ವೇಳೆ ನಾಯಿಯ ಪ್ರಾಣ ಕಾಪಾಡಲು ಹೋದ ಚಾಲಕ ರಸ್ತೆ ಬದಿಗೆ ಕಾರು ಇಳಿಸಿದ್ದಾನೆ. ಕಾರು ನಿಯಂತ್ರಣ ತಪ್ಪಿ ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಕಂಬಗಳಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿ, ಮೂವರು ಮೃತ ಪಟ್ಟಿದ್ದಾರೆ. ದೇವಲಗಾಣಗಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here