ಕಲಬುರಗಿ:- ನಾಟಿ ಔಷಧಿ ಸೇವಿಸಿ ಮೂವರ ವಿಲ-ವಿಲ ಎಂದು ಒದ್ದಾಡಿ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಇಮದಾಪುರ ಗ್ರಾಮದಲ್ಲಿ ಜರುಗಿದೆ.
ಭೂರಪಲ್ಲಿ ಗ್ರಾಮದ ಲಕ್ಷ್ಮೀ, ಶಹಾಬಾದ್‌ನ ಗಣೇಶ, ಮುದಕಲ್ ಗ್ರಾಮದ ನಾಗಯ್ಯ ಮೃತರು. ಘಟನೆ ಬಳಿಕ ನಾಟಿ ವೈದ್ಯ ಫಕೀರಪ್ಪ ಪರಾರಿ ಆಗಿದ್ದಾನೆ. ಕೂಡಲೇ ಘಟನಾ ಸ್ಥಳಕ್ಕೆ ಸೇಡಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಆರೋಪಿ ಸಾಯಪ್ಪ ಮುತ್ಯಾ ಅರೆಸ್ಟ್:
ಘಟನೆ ಬಳಿಕ ಎಸ್ಕೇಪ್ ಆಗಿದ್ದ ಆರೋಪಿ ಸಾಯಪ್ಪ ಮುತ್ಯಾ ನನ್ನು ಮಧ್ಯರಾತ್ರಿ ತೆಲಂಗಾಣ ಗಡಿಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಘಟನೆ ಬೆನ್ನಲ್ಲೇ ತೆಲಂಗಾಣದಲ್ಲಿನ ತಂಗಿ ಮನೆಗೆ ಎಸ್ಕೇಪ್ ಆಗಿದ್ದ ಆರೋಪಿ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ.
ಏನಿದು ಘಟನೆ?
ಕಲಬುರಗಿಯ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಕುಡಿತದ ಚಟ ಬಿಡಿಸಲು ಆರೋಪಿ ಸಾಯಪ್ಪಾ ನೀಡಿದ್ದ ಔಷಧಿ ಸೇವಿಸಿದ ಬಳಿಕ ಮೂವರು ಒದ್ದಾಡಿ ಸಾವನ್ನಪ್ಪಿದ್ದರು.
ಘಟನೆ ಬಳಿಕ ಆರೋಪಿ ಎಸ್ಕೇಪ್ ಆಗಿದ್ದ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.