ರಾಯಚೂರು: ಲಾರಿ ಪಲ್ಟಿಯಾದ ಪರಿಣಾಮ ಮೂವರು ಪಿಡಬ್ಲುಡಿ ಅಧಿಕಾರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಡಾಲರ್ಸ್ ಕಾಲೋನಿ ಬಳಿ ನಿನ್ನೆ ತಡ ರಾತ್ರಿ ನಡೆದಿದೆ. ಮಲ್ಲಿಕಾರ್ಜುನ(29), ಶಿವರಾಜ್(28) ಹಾಗೂ ಮೆಹಬೂಬ್(30) ಮೃತ ದುರ್ಧೈವಿಗಳಾಗಿದ್ದು,
Advertisement
ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಗಳಾಗಿದ್ದ ಮಲ್ಲಿಕಾರ್ಜುನ, ಶಿವರಾಜು ಮತ್ತು ಕಂಪ್ಯೂಟರ್ ಆಪರೇಟರ್ ಆಗಿದ್ದ ಮೆಹಬೂಬ್ ರಾತ್ರಿ ಕೆನಲ್ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ರಸ್ತೆ ಬದಿ ಮೂವರು ಮಾತಾಡುತ್ತ ನಿಂತಿದ್ದರು.
ಅದೇ ಮಾರ್ಗವಾಗಿ ಬಂದ ಹೊಟ್ಟು ತುಂಬಿದ್ದ ಲಾರಿ ಚಾಲಕನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಮೂವರು ಅಧಿಕಾರಿಗಳ ಮೇಲೆ ಬಿದ್ದಿದೆ. ಲಾರಿ ಕೆಳಗೆ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. ಸದ್ಯ ಲಾರಿ ಚಾಲಕನನ್ನ ವಶಕ್ಕೆ ಪಡೆದ ಸಿಂಧನೂರು ಟ್ರಾಫಿಕ್ ಪೊಲೀಸರು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.