ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಸುಮಾರು 300 ಕೋಟಿ ರೂಪಾಯಿ ಬಜೆಟ್ ನಲ್ಲಿ ರೆಡಿಯಾದ ಥಗ್ ಲೈಫ್ ಸಿನಿಮಾ ಇದುವರೆಗೂ ಘಳಿಸಿರೋದು ಕೇವಲ 42 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಈ ಮೂಲಕ ಥಗ್ ಲೈಫ್ ಸಿನಿಮಾ ಹೀನಾಯ ಸೋಲು ಅನುಭವಿಸಿದೆ.
ಕಮಲ್ ಹಾಸನ್ ನಟನೆಯ ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಸಿನಿಮಾ ಆರಂಭಕ್ಕೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಆದರೆ ಕಮಲ್ ಹಾಸನ್ ಕನ್ನಡದ ಬಗ್ಗೆ ನೀಡಿದ ಒಂದೇ ಒಂದು ಹೇಳಿಕೆಯಿಂದಲೇ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಲೇ ಇದು. ಇದು ಚಿತ್ರತಂಡಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ.
ಒಂದು ಕಡೆ ಕಲೆಕ್ಷನ್ ನಲ್ಲಿ ಸಿನಿಮಾ ಸೋಲು ಕಂಡಿದ್ರೆ ಮತ್ತೊಂದೆಡೆ ಥಗ್ ಲೈಫ್ ಸಿನಿಮಾದ ಒಟಿಟಿ ರೈಟ್ಸ್ ಮೇಲೂ ಪರಿಣಾಮ ಬೀರಿದೆ. ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಕೊಟ್ಟು ರೈಟ್ಸ್ ಖರೀದಿಸಿದ್ದ ನೆಟ್ ಫ್ಲಿಕ್ಸ್ ಥಗ್ ಲೈಫ್ ಸಿನಿಮಾ ಹೀನಾಯ ಸೋಲು ಕಂಡ ಮೇಲೆ ಮೇಲೆ ತನ್ನ ನಿಲುವು ಬದಲಾಯಿಸಿದೆ. ಒಟಿಟಿ ಒಪ್ಪಂದವನ್ನ ಮುರಿದುಕೊಳ್ಳಲು ನೆಟ್ ಫ್ಲಿಕ್ಸ್ ಮುಂದಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ.
ನಟ ಕಮಲ್ ಹಾಸನ್ ಅವರು ಥಗ್ ಲೈಫ್ ರಿಲೀಸ್ಗೆ ಮುನ್ನ ಇವೆಂಟ್ ಒಂದರಲ್ಲಿ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಹೀಗಾಗಿ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಿಲ್ಲ. ಇದಾದ ಬಳಿಕ ಕಮಲ್ ಕೋರ್ಟ್ ಮೆಟ್ಟಿಲೇರಿದ್ದರು ಅಲ್ಲೂ ಕಮಲ್ ಗೆ ಛೀಮಾರಿ ಹಾಕಲಾಯ್ತು. ಇತ್ತ ಕಡೆ ಕನ್ನಡಿಗರು ಥಗ್ ಲೈಫ್ ಸಿನಿಮಾವನ್ನು ಬ್ಯಾನ್ ಮಾಡಿದ್ರೆ ಅತ್ತ ಕಡೆ ತಮಿಳುನಾಡಿನ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಕೂಡಾ ಥಗ್ ಲೈಫ್ ಫೇಲ್ ಆಗಿದೆ.