ವಿವಾದದ ನಡುವೆಯೂ ಕರ್ನಾಟಕದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಥಗ್ ಲೈಫ್‌

0
Spread the love

ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್‌ ಹಾಸನ್‌ ನಟನೆಯ ಥಗ್‌ ಲೈಫ್‌ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹಲವು ಸಂಘಟನೆಗಳು ರೊಚ್ಚಿಗೆದ್ದಿವೆ. ಸಿನಿಮಾವನ್ನು ರಿಲೀಸ್‌ ಮಾಡಿದರೆ ಥಿಯೇಟರ್‌ ಗೆ ಬೆಂಕಿ ಹಚ್ಚುವುದಾಗಿ ಕರವೆ ಎಚ್ಚರಿಕೆ ನೀಡಿದೆ. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಕೆಲವು ಚಿತ್ರಮಂದಿರಗಳು ಥಗ್‌ ಲೈಫ್‌ ಸಿನಿಮಾ ರಿಲೀಸ್‌ ಮಾಡಲು ಮುಂದಾಗಿವೆ ಎಂದು ಹೇಳಲಾಗುತ್ತಿದೆ.

Advertisement

ಸಿಂಗಲ್‌ ಸ್ಕ್ರೀನ್‌ ಸೋಶಿಯಲ್‌ ಮೀಡಿಯಾದಲ್ಲಿ ಥಗ್‌ ಲೈಫ್‌ ಸಿನಿಮಾದ ಮುಂಗಡ ಬುಕಿಂಗ್‌ ಬಗ್ಗೆ ಪೋಸ್ಟ್‌ ಹಂಚಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ತಮಿಳು ಭಾಷೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಕಮಲ್‌ ಹಾಸನ್‌ ಅಭಿಮಾನಿಗಳು ಕೂಡ ಜಾಸ್ತಿಯೇ ಇದ್ದಾರೆ. ಇದನ್ನೆ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಕೆಲವು ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಗಳು ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿವೆ.

ಒಂದು ಕಡೆ ಕನ್ನಡ ಭಾಷೆಯ ಬಗ್ಗೆ ಕಮಲ್‌ ಹಾಸನ್‌ ಆಡಿರುವ ಮಾತು ಮತ್ತೊಂದೆಡೆ ಥಗ್‌ ಲೈಫ್‌ ಸಿನಿಮಾ ಕನ್ನಡ ಹೊರತುಪಡಿಸಿ ಉಳಿದೆಲ್ಲ ದಕ್ಷಿಣ ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಇದು ಕೂಡ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಿರುವಾಗ ಕರ್ನಾಟಕದಲ್ಲಿ ಥಗ್‌ ಲೈಫ್‌ ಸಿನಿಮಾ ರಿಲೀಸ್‌ ಮಾಡಲು ಕೆಲವು ಥಿಯೇಟರ್‌ ಗಳು ಸಜ್ಜಾಗಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ,


Spread the love

LEAVE A REPLY

Please enter your comment!
Please enter your name here