ಚಾಮರಾಜನಗರ: ಕಾಡಿನಿಂದ ಹೊರಬಂದು ಗ್ರಾಮಗಳಲ್ಲಿ ಅಡ್ಡಾಡುತ್ತಿರುವ ಹುಲಿರಾಯ ಹೌದು ಭಾರೀ ಗಾತ್ರದ ಹುಲಿಯೊಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಸುತ್ತಾಮುತ್ತಾ ಬೀಡುಬಿಟ್ಟಿದೆ.
ಬಂಡೀಪುರ ಹುಲಿ ಸುರಕ್ಷಿತ ಅರಣ್ಯ ಪ್ರದೇಶದಿಂದ ಹೊರಬಂದಿರುವ ವ್ಯಾಘ್ರ ಆಗಿದ್ದು, ಪಡಗೂರು ಮೂಡುಗೂರು ಕೊಡಸೋಗೆ ಬೊಮ್ಮಲಾಪುರ ಅಡ್ಡಾಡಿಕೊಂಡಿದೆ.
ರೈತರ ಜಾನುವಾರುಗಳನ್ನು ಕೊಂದು ಹೊಟ್ಟೆತುಂಬಿಸಿಕೊಳ್ಳುತ್ತಿದ್ದು, ಪಡಗೂರು,ಮೂಡಗೂರು, ಮಲ್ಲಮ್ಮನಹುಂಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ.
ಇನ್ನೂ ರೈತರ ಜಮೀನುಗಳಲ್ಲಿ ಅರಾಮವಾಗಿ ಅಡ್ಡಾಡುತ್ತಾ ಜಾನುವಾರುಗಳನ್ನು ಕೊಲ್ಲುತ್ತಿದ್ರೂ ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ.
ಪಡಗೂರು ಸುತ್ತಾಮುತ್ತಾ ಮುಂಜಾನೆ ಯುವ ರೈತರ ಕಣ್ಣಿಗೆ ಕಾಣಿಸುತ್ತಿದೆ. ಆದ್ರೆ ಅರಣ್ಯ ಇಲಾಖೆ ಕಣ್ಣಿಗೆ ಕಾಣದೆ ಆಟ ಆಡಿಸುತ್ತಿದೆ.
ಕಾಡು ಬಿಟ್ಟು ನಾಡಿಗೆ ಬಂದು ವೆಲ್ ಸೆಟಲ್ ಆಗಿರುವ ಹುಲಿ ದಾಳಿಗೆ ಪ್ರತಿನಿತ್ಯ ಆತಂಕ ಪಡುತ್ತಿರುವ ರೈತರು, ಮನುಷ್ಯರ ಮೇಲ ಎರಗಿ ಅನಾಹುತ ಸೃಷ್ಟಿಸುವ ಮೊದಲು ಹುಲಿ ಸೆರೆಗೆ ಮುಂದಾಗುವಂತೆ ಒತ್ತಾಯ ಮಾಡಿದ್ದಾರೆ.