ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ರಸ್ತೆಯ ಮಹದೇಶ್ವರ ದೇವಾಲಯದ ಸಮೀಪ ಇಂದು ಬೆಳಗಿನ ಜಾವ ಹುಲಿಯೊಂದು ರಸ್ತೆ ಬಳಿ ಸಂಚರಿಸಿರುವ ಘಟನೆ ವರದಿಯಾಗಿದೆ.
ಮೀಣ್ಯಂ ಗ್ರಾಮದಿಂದ ರಾಮಾಪುರದತ್ತ ತೆರಳುತ್ತಿದ್ದ ಬಸ್ ಹತ್ತಿರವೇ ಹುಲಿ ನಡೆದುಕೊಂಡು ಹೋಗಿರುವುದು ಕಂಡುಬಂದಿದ್ದು, ಇದರಿಂದ ಕೆಲಕಾಲ ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಭೀತಿ ಮೂಡಿತು. ಈ ಸಂದರ್ಭ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಹುಲಿಯ ಚಲನವಲನವನ್ನು ಚಿತ್ರೀಕರಿಸಿದ್ದಾರೆ.
ಇದೇ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಸುಮಾರು ಐದು ತಿಂಗಳ ಹಿಂದೆ ಐದು ಹುಲಿಗಳು ವಿಷಪ್ರಾಶನದಿಂದ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇದೀಗ ಮತ್ತೆ ಹುಲಿ ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹುಲಿಯ ಮೇಲ್ವಿಚಾರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.



