ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ನ ಕೃಷ್ಣ ಕನ್ವೆನ್ಷನ್ ಸೆಂಟರ್ ಬಳಿ ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿ ಟಿಪ್ಪರ್ ಚಾಲಕ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ರಮೇಶ್ (35) ಸಾವಿಗೀಡಾದ ಚಾಲಕ. ಇವರು ರಾಯಚೂರಿನ ಲಿಂಗಸೂರಿನ ನಿವಾಸಿ ಎನ್ನಲಾಗಿದೆ. ಟಿಪ್ಪರ್ ಲಾರಿ ಚೇಸ್ ಮಾಡಿದ್ದ ಗಣಿ ಅಧಿಕಾರಿ ಸವಿತಾ. ಗಣಿ ಅಧಿಕಾರಿಗೆ ಹೆದರಿ ಟಿಪ್ಪರ್ ಚಾಲಕ ಓಡಿ ಹೋಗಿದ್ದ. ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ನಿಲ್ಲಿಸಿ ಚಾಲಕ ಎಸ್ಕೇಪ್ ಆಗಲು ಮುಂದಾಗಿದ್ದ. ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿದ್ದಾನೆ. ಕಾರು ಡಿಕ್ಕಿ ಹೊಡೆದು ಟಿಪ್ಪರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಟಿಪ್ಪರ್ ಲಾರಿ ಹಾಗೂ ಅಪಘಾತ ಮಾಡಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


