ಬೆಂಗಳೂರು:-ಬೆಂಗಳೂರಿನ ಯಶವಂತಪುರ ಫ್ಲೈಓವರ್ ನಲ್ಲಿ ಅವಘಡ ಸಂಭವಿಸಿದೆ.ಟಯರ್ ಬ್ಲಾಸ್ಟ್‌ಗೊಂಡು ಗೆಣಸು ತುಂಬಿದ್ದ ಬೊಲೆರೋ ಪಲ್ಟಿಯಾದ ಘಟನೆ ಜರುಗಿದೆ. ಅಪಘಾತದ ಪರಿಣಾಮ ರಸ್ತೆ ತುಂಬೆಲ್ಲಾ ಗೆಣಸು ತುಂಬಿದ್ದ ಚೀಲಗಳು ಹರಡಿದೆ. ಇಂದು ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿದೆ.
ಬೊಲೆರೋ ವಾಹನ ಹುಬ್ಬಳಿಯಿಂದ ತಮಿಳುನಾಡಿನ ಕೃಷ್ಣಗಿರಿಗೆ ಗೆಣಸು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಟಯರ್ ಬ್ಲಾಸ್ಟ್‌ಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಪರಿಣಾಮ ಸ್ಥಳದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಕಳೆದ ನಾಲ್ಕೈದು ತಿಂಗಳ ಅಂತರದಲ್ಲಿ ಫ್ಲೈಓವರ್ ಮೇಲೆ ನಡೆದ ಮೂರನೇ ಅಪಘಾತ ಇದಾಗಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.