ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಎಪಿಎಂಸಿ ಬಳಿ ಸಾಲಭಾಧೆಯಿಂದ ರೈಲಿಗೆ ಸಿಲುಕಿ ಯುವಕನೊಬ್ಬ ಆತ್ನಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದಾಸನಪುರದ ವಿಕ್ರಂ ಸಿಂಹ(28) ಮೃತ ವ್ಯಕ್ತಿಯಾಗಿದ್ದು, ಐಡಿಎಫ್ಸಿ ಬ್ಯಾಂಕ್ನಲ್ಲಿ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೃತ ಯುವಕ ವಿಕ್ರಂ ಸಿಂಹ,
Advertisement
ಸಾಲ ಮೊಡಿಕೊಂಡಿದ್ದನು. ಬ್ಯಾಂಕ್ ಇಎಂಐ ಜೊತೆಗೆ ಸಾಲಗಾರರ ಕಿರುಕುಳದಿಂದಾಗಿ ಬೇಸತ್ತಿದ್ದ ವಿಕ್ರಂ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಪ್ಪ, ಅಮ್ಮನಿಗೆ ಕ್ಷಮೆ ಕೋರಿ ಡೆತ್ ನೋಟ್ ಬರೆದಿಟ್ಟು ಕೊನೆಯುಸಿರೆಳೆ ದಿದ್ದಾನೆ. ಇನ್ನೂ ಈ ಘಟನೆ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.