ಬೆಳಗಾವಿ: ಗಂಡ ಹಾಗೂ ಅವರ ಮನೆಯವರ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ. ಸವಿತಾ ಮಾರುತಿ ಜೋಗಾನಿ (32) ನೇಣಿಗೆ ಶರಣಾದ ಮಹಿಳೆಯಾಗಿದ್ದು, ರಾಕಸಕೊಪ್ಪ ಗ್ರಾಮದ ಮಾರುತಿ ಜೋಗಾನಿ (40) ಪತಿಯಾಗಿದ್ದು, ಮಾರುತಿ ಎಂಬುವರ ಜೊತೆ ಸವಿತಾ ಮದುವೆಯಾಗಿ 6 ವರ್ಷವಾಗಿತ್ತು.
ದಂಪತಿಗೆ 4 ವರ್ಷದ ಗಂಡು ಮಗುವಿದೆ.2018 ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಅದ್ಧೂರಿ ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದ ನಂತರ ಪತಿ ಮಾರುತಿ, ಆತನ ಮನೆಯವರಿಂದ ನಿರಂತರ ಕಿರುಕುಳ ಹಾಗು ಕ್ಷುಲ್ಲಕ ಕಾರಣಕ್ಕೆ ಮನಬಂದಂತೆ ಥಳಿಸುತ್ತಿದ್ದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಈ ಸಂಬಂಧ ಮೃತಳ ತಾಯಿ ಭಾರತಿ ಮೋರೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.