ಬೀದರ್: ಸಾಲಬಾಧೆಗೆ ಬೇಸತ್ತು ಬ್ರಿಮ್ಸ್ ಆಸ್ಪತ್ರೆಯ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯ ಮೊಹಮ್ಮದ್ ಸೋಹೆಲ್ ಮೃತ ದುರ್ದೈವಿ. ಬೀದರ್ ತಾಲೂಕಿನ ಚಿಟ್ಟಾ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯ ಮೊಹಮ್ಮದ್ ಸೋಹೆಲ್ ಎಂಬಿಬಿಎಸ್ ಅಧ್ಯಯನಕ್ಕಾಗಿ ವಿವಿಧ ಫೈನಾನ್ಸ್ನಲ್ಲಿ ಲಕ್ಷಾಂತರ ಸಾಲ ಮಾಡಿದ್ದರು.
Advertisement
ಸಾಲ ತೀರಿಸಲು ಆಗದೆ ನೇಣು ಬಿಗಿದುಕೊಂಡು ವೈದ್ಯ ಮೊಹಮ್ಮದ್ ಸೋಹೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ವೈದ್ಯ ಮೊಹಮ್ಮದ್ ಸೋಹೆಲ್ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ. ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.