ಚಿತ್ರದುರ್ಗ:- ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ಜರುಗಿದೆ.
Advertisement
ಮೃತರನ್ನು ಚಿತ್ರದುರ್ಗ ನಗರದ IUDP ಲೇಔಟ್ ನಿವಾಸಿ 38 ವರ್ಷದ ಮಂಜುನಾಥ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಚೇತನ ಜೊತೆ ಮಂಜುನಾಥ್ ವಿವಾಹ ವಾಗಿದ್ದ. ಕೌಟುಂಬಿಕ ಕಲಹದ ಹಿನ್ನಲೆ ಪತಿಗೆ ಚೇತನ ಕಿರುಕುಳ ನೀಡುತ್ತಿದ್ದರು ಎಂದುಪತ್ನಿ ಚೇತನಾ ವಿರುದ್ದ ಮಂಜುನಾಥ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಪತಿ ಮುಂಜುನಾಥ್ ವಿರುದ್ದ ಮಹಿಳಾ ಠಾಣೆಗೆ ಪತ್ನಿ ಚೇತನ ದೂರು ಕೊಟ್ಟಿದ್ದರು. ಇದರಿಂದ ಮನನೊಂದು ಮನೆಯಲ್ಲಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಜಿಲ್ಲಾಸ್ಪತ್ರೆ CT ಸ್ಕ್ಯಾನ್ ವಿಭಾಗದಲ್ಲಿ ಮಂಜುನಾಥ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.