ಹೆಂಡ್ತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಕ್ಕಳಿಗೆ ವಿಷವುಣಿಸಿ ಗಂಡ ಸೂಸೈಡ್!

0
Spread the love

ಗಾಂಧಿನಗರ:- ಇಲ್ಲಿನ ಸೂರತ್‌ನಲ್ಲಿ ಹೆಂಡ್ತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿಯೋರ್ವ ತನ್ನ ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ಸೂರತ್ ನಗರದ ದಿಂಡೋಲಿಯ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ ಅಲ್ಪೇಶ್‌ಭಾಯ್ (41) ತನ್ನ 7 ವರ್ಷ ಹಾಗೂ 2 ವರ್ಷದ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.

ಪತ್ನಿ ಫಲ್ಗುಣಿ ಭಾಯಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತಳಾಗಿದ್ದಳು. ಫಲ್ಗುಣಿ ಪತಿಗೆ ಫೋನ್ ಮಾಡಿದ ವೇಳೆ ಅಲ್ಪೇಶ್ ಉತ್ತರಿಸಿರಲಿಲ್ಲ. ಈ ಹಿನ್ನೆಲೆ ಮನೆಗೆ ಬಂದು ನೋಡಿದಾಗ ಬಾಗಿಲುಗಳು ಲಾಕ್ ಆಗಿತ್ತು. ನಂತರ ಪತ್ನಿ ಸಂಬಂಧಿಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಬಂದ ಸಂಬಂಧಿಕರು ಮನೆಯ ಬಾಗಿಲು ಒಡೆದು ಒಳಗೆ ಹೋದಾಗ ಹಾಸಿಗೆಯ ಮೇಲೆ ಇಬ್ಬರು ಮಕ್ಕಳು ಹಾಗೂ ಪಕ್ಕದಲ್ಲೇ ಪತಿ ಕೂಡ ಶವವಾಗಿ ಬಿದ್ದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತ ಅಲ್ಪೇಶ್ ಮೊಬೈಲ್‌ನಲ್ಲಿ ಡೆತ್ ನೋಟ್ ಹಾಗೂ ಕೆಲವು ವೀಡಿಯೋಗಳು ಲಭಿಸಿವೆ. ಅಲ್ಲದೇ ರೂಮ್‌ನಲ್ಲಿ ಎರಡು ಡೈರಿಗಳು ಕೂಡ ಸಿಕ್ಕಿದೆ. ಘಟನೆ ಸಂಬಂಧ ಅಲ್ಪೇಶ್ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here