ದಾವಣಗೆರೆ: ಅಕ್ಕನ ಅಕ್ರಮ ಸಂಬಂಧಕ್ಕೆ ಬೇಸತ್ತ ತಮ್ಮನಿಂದಲೇ ಮಗು ಅಪಹರಣ: ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ!?

0
Spread the love

ದಾವಣಗೆರೆ:- ಅಕ್ಕನ ಅಕ್ರಮ ಸಂಬಂಧಕ್ಕೆ ಬೇಸತ್ತು ಅಕ್ಕನ ಮಗನನ್ನೇ ತಮ್ಮನೋರ್ವ ಅಪಹರಿಸಿರುವ ಘಟನೆ ದಾವಣಗೆರೆಯಲ್ಲಿ ಜರುಗಿದೆ.

Advertisement

ದಾವಣಗೆರೆ ಗೆ ಬಂದ ನಿಜಾಮುದ್ದೀನ್ ಎಕ್ಸಪ್ರೇಸ್ ನಲ್ಲಿ ತರುಣ್ ಎಂಬ 17 ವರ್ಷದ ಬಾಲಕ ತನ್ನ ಅಕ್ಕನ ಮಗನಾದ 3 ವರ್ಷದ ಗೋಯಲ್ ಎಂಬ ಬಾಲಕನನ್ನು ಅಪಹರಣ ಮಾಡಿ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾವಣಗೆರೆ RPF ಸಿಬ್ಬಂದಿ 17 ವರ್ಷದ ಬಾಲಕನನ್ನು ಅರೆಸ್ಟ್ ಮಾಡಿ ಮಗು ರಕ್ಷಿಸಿದ್ದಾರೆ.

ಮಗು ಕಾಣದ ಹಿನ್ನೆಲೆ, ಪೋಷಕರು ಬೆಂಗಳೂರಿನಲ್ಲಿ ದೂರು ಕೊಟ್ಟಿದ್ದರು. ದೂರಿನ ಅನ್ವಯ ಬೆಂಗಳೂರು ಪೊಲೀಸರು ದಾವಣಗೆರೆ ರೈಲ್ವೆ RPF ಸಿಬ್ಬಂದಿಗೆ ಮಾಹಿತಿ ಕೊಟ್ಟಿದ್ದಾರೆ. ಮಾಹಿತಿ ಅನ್ವಯ ಟ್ರೈನ್ ಬರುತ್ತಿದ್ದಂತೆ ಕಾದು ಕುಳಿತ ಸಿಬ್ಬಂದಿ ಬಾಲಕನನ್ನು ವಿಚಾರಣೆ ಮಾಡಿದಾಗ ಅನುಮಾನದ ಮೇಲೆ ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಸತ್ಯ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿದ್ದ ಅಕ್ಕ ಅಕ್ರಮ ಸಂಬಂಧವಿಟ್ಟುಕೊಂಡು ಬೇರೆ ವ್ಯಕ್ತಿ ಜೊತೆ ವಾಸಿಸುತ್ತಿದ್ದಳು. ಈ ವೇಳೆ ತಮ್ಮ ಬುದ್ದಿ ಹೇಳಿದ್ದಾನೆ. ಆದರೆ ಅಕ್ರಮ ಸಂಬಂಧ ಬಿಡಲು ಒಪ್ಪದಿದ್ದಕ್ಕೆ ಮಗುವನ್ನ ಅಪಹರಿಸಿಕೊಂಡು ತಮ್ಮ ಬಂದಿದ್ದಾನೆ.

ಖಚಿತ ಮಾಹಿತಿ ಮೇರೆಗೆ ರೈಲ್ವೆ ಇನ್ಸ್ ಪೆಕ್ಟರ್ A K ರೆಡ್ಡಿ, ಸಿಬ್ಬಂದಿಗಳಾದ ಶಿವಾನಂದ, ಅಮಿತ್, ಬಿಂದು ಮಧುರಿ ಕಾರ್ಯಚರಣೆ ಮಾಡಿ ಟ್ರೈನ್ ನಲ್ಲಿ ಬಾಲಕನನ್ನು ವಶಕ್ಕೆ ಪಡೆದು ಮಗು ರಕ್ಷಣೆ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here