ಸರ್ಕಾರದ ಹಗರಣ ಮುಚ್ಚಿ ಹಾಕಲು ಕೋವಿಡ್ ವಿಚಾರ ತೆಗೆದಿದ್ದಾರೆ: ಬಿ ಶ್ರೀರಾಮುಲು!

0
Spread the love

ಬಳ್ಳಾರಿ:- ಕಾಂಗ್ರೆಸ್‌ನವರ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

Advertisement

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷಗಳ ಕಾಲ ತುಟಿ ಬಿಚ್ಚದ ಸರ್ಕಾರ ಈಗ ಸಿದ್ದರಾಮಯ್ಯ ಹಗರಣಗಳನ್ನು ಮುಚ್ಚಿ ಹಾಕಲು ಯಡಿಯೂರಪ್ಪ, ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲು ಹೊರಟಿದ್ದಾರೆ ಇಂತಹ ಗೊಡ್ಡು ಬೆದರಿಕೆಗೆ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದರು.

ಕಾಂಗ್ರೆಸ್ಸರ್ಕಾರದ ಗೊಡ್ಡು ಬೆದರಿಕೆ ನನಗೆ ಏನು ಮಾಡದು. ನಾನು ಸಚಿವನಾಗಿದ್ದ ಅವಧಿಯಲ್ಲಿ ಕರೋನಾ ಕಲಬುರಗಿಯಿಂದ ರಾಜ್ಯದ ತುಂಬೆಲ್ಲಾ ಹರಡಿತ್ತು. ನಾನು ಆರೋಗ್ಯ ಸಚಿವನಾಗಿದ್ದೆ. ಟಾಸ್ಕ್ ಫೋರ್ಸ್ ಮಾಡಿಕೊಂಡು, ಕೆಲಸ ಮಾಡಿದ್ದೇವೆ. ರಾಜ್ಯ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ ಮುಚ್ಚಿಹಾಕಲು, ನನ್ನ ಮೇಲೆ, ಯಡಿಯೂರಪ್ಪ ಮೇಲೆ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿದ್ದಾರೆ. ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ದೇವರ ಜೊತೆ ಅಂದು ನಾವು ಕೆಲಸ ಮಾಡಿದ್ದೇವೆ. ಅವರು ಏನು, ಮಾಡುತ್ತಾರೋ, ಮಾಡಲಿ ಎಂದರು.

ವಾಲ್ಮೀಕಿ ಹಗರಣ ಯಾಕೆ ಆಯ್ತು? ಅಂತ ನಾವು ಜನರ ಬಳಿ ಹೇಳ್ತಿದ್ದೇವೆ. ಇದನ್ನೆಲ್ಲ ಮುಚ್ಚಿಹಾಕುವ ಷಡ್ಯಂತ್ರಗಳಿಂದ ಈಗ ಕೋವಿಡ್ ವಿಚಾರ ತೆಗೆದಿದ್ದಾರೆ. ಒಂದೂವರೇ ವರ್ಷಗಳ ಕಾಲ ಏನು ಮಾಡ್ತಿದ್ರಿ? ನನ್ನ ವಿರುದ್ಧ ಒಂದೇ, ಒಂದು ಆರೋಪ ಸಾಬೀತು ಮಾಡಲಿ. ದ್ವೇಷದ ರಾಜಕಾರಣ ಒಳ್ಳೆಯದಲ್ಲ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here