ಸಿದ್ದರಾಮಯ್ಯಗೆ ಇಂದು ಮಹತ್ವದ ದಿನ; ಡಿಕೆಶಿಗೂ ಟೆನ್ಷನ್ ಶುರು, ಎಲ್ಲರ ಚಿತ್ತ ಕೋರ್ಟ್ ನತ್ತ!

0
Spread the love

ಬೆಂಗಳೂರು:- ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಕಾಂಗ್ರೆಸ್​ ಪಕ್ಷದ ಜೋಡೆತ್ತುಗಳು ಅಂದರೆ ತಪ್ಪಾಗಲ್ಲ. ಆದ್ರೆ ಕಾಂಗ್ರೆಸ್​ನ ಈ ಜೋಡೆತ್ತುಗಳಿಗೆ ಇವತ್ತು ಬಹಳ ಮುಖ್ಯವಾದ ದಿನ. ಮುಡಾ ಇಡೀ ರಾಜ್ಯ ರಾಜಕಾರಣದ ಮೂಡ್​​​ ಬದಲಿಸುತ್ತಾ? ಕ್ಷಿಪ್ರಕ್ರಾಂತಿಗೆ ಮುನ್ನುಡಿ ಬರೆಯುತ್ತಾ? ಸಿದ್ದರಾಮಯ್ಯ ಕಾನೂನು ಕದನ ಏನಾಗಲಿದೆ? ಸಿಎಂ ಸಿಂಹಾಸನದ ಕಥೆ ಏನು? ಇವತ್ತು ಹೈಕೋರ್ಟ್​ನ ಕಟಕಟೆಯಲ್ಲಿ ಮುಡಾ ಮಹಾಯುದ್ಧದ ರಿಸಲ್ಟ್​​ ಮೇಲೆ ಇಡೀ ಕಥನವೇ ನಿಂತಿದೆ.

Advertisement

ಇವತ್ತು ಏನಾಗಲಿದೆ ಅನ್ನೋ ದೇಶದ ಕುತೂಹಲದ ಕಣ್ಣು, ಕರ್ನಾಟಕ ಹೈಕೋರ್ಟ್​​ನತ್ತ ನೆಟ್ಟಿದೆ. ಮುಡಾ ಸೈಟ್ ಹಂಚಿಕೆ ಹಗರಣ ಸಿಎಂ ಸಿದ್ದು ಗದ್ದುಗೆಯನ್ನೇ ನಡುಗಿಸ್ತಿದೆ. ಹೈಕೋರ್ಟ್ 10 ದಿನಗಳ ಕಾಲ ರಿಲೀಫ್​​ಗೆ ಜಾರಿದ್ದ ಸಿದ್ದು ರಿಟ್​​ ಅರ್ಜಿ, ಇವತ್ತು ಮತ್ತೆ ವಿಚಾರಣೆಗೆ ಬರಲಿದೆ. ಈ ಅರ್ಜಿ ಮೇಲೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಅವಲಂಭಿಸಿವೆ.

ಇವತ್ತು ಮಧ್ನಾಹ್ನ 2.30ಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಈ ಹಿಂದೆ ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಅಭಿಷೇಕ್​ ಮನು ಸಂಘ್ವಿ, ರಾಜ್ಯಪಾಲರ ಕಚೇರಿಯ ಪರವಾಗಿ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ವಾದ ಮಂಡಿಸಿದ್ದರು. ಇವತ್ತೂ ಕೂಡ ತಮ್ಮ ವಾದ ಪ್ರತಿವಾದವನ್ನು ಮುಂದುವರೆಯಲಿದೆ.

ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್​ಗೂ ಇವತ್ತು ಅತಂತ್ಯ ಮಹತ್ವದ ದಿನವಾಗಿದೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತೀರ್ಪು ಕೂಡ ಇವತ್ತು ಪ್ರಕಟವಾಗಲಿದೆ. ಸಿಬಿಐ ಮತ್ತು ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿಸಿರುವ ಹೈಕೋರ್ಟ್, ಇವತ್ತಿಗೆ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಇದು ತೀವ್ರ ಕುತೂಹಲ ಕೆರಳಿಸಿದೆ.

ಒಟ್ಟಾರೆ ಇವತ್ತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿ ಇಬ್ಬರಿಗೂ ಬಿಗ್ ಡೇ. ಹೀಗಾಗಿ ರಾಜ್ಯ ಕಾಂಗ್ರೆಸ್​ನ ಚಿತ್ತ ಹೈಕೋರ್ಟ್​ನತ್ತ ಹರಿದಿದೆ.


Spread the love

LEAVE A REPLY

Please enter your comment!
Please enter your name here