ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹುಡ್ಕೋ ಕಾಲೋನಿ ಆದರ್ಶ ನಗರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಉತ್ಸವದ ನಿಮಿತ್ತ ಜು. 10ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Advertisement
ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ, ಮಂಗಳಸ್ನಾನ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ, ಆರತಿ ಜರುಗಲಿದ್ದು, 10 ಗಂಟೆಗೆ ಶ್ರೀ ಸಾಯಿ ಸತ್ಯನಾರಾಯಣ ಪೂಜೆ ಜರುಗಲಿದೆ. 12 ಗಂಟೆಗೆ ಮಹಾಪ್ರಸಾದ ಜರುಗಲಿದ್ದು, ಸಂಜೆ 6.30ಕ್ಕೆ ಧೂಪಾರತಿ, ಪ್ರಸಾದ ವಿತರಣೆ, 8 ಗಂಟೆಗೆ ಶೇಜಾರತಿಯೊಂದಿಗೆ ಉತ್ಸವ ಮಹಾಮಂಗಳ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.