ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತೆ. ಈ ದಿನದಂದು, ಛಾಯಾಗ್ರಹಣ ಉತ್ಸಾಹಿಗಳು ಈ ಸುಂದರವಾದ ಕಲೆಯನ್ನು ಆಚರಿಸಲು ಒಟ್ಟಾಗಿ ಸೇರುತ್ತಾರೆ. ಛಾಯಾಚಿತ್ರ ತೆಗೆಯಲು ಬಳಸುವ ಸಾಧನಗಳು ತಂತ್ರಜ್ಞಾನದಲ್ಲಿ ನಾಟಕೀಯ ಬೆಳವಣಿಗೆಗಳ ಮೂಲಕ ಸಾಗಿವೆ.
ಆದರೆ ಛಾಯಾಗ್ರಹಣದ ಸಾರ ಮತ್ತು ಭಾಷೆ ಹಾಗೆಯೇ ಉಳಿದಿದೆ. ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ” ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಛಾಯಾಗ್ರಹಣಕ್ಕೆ ಇರುವ ಸಾಮರ್ಥ್ಯವೇ ಅಂತಹದ್ದು, ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೇಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸುತ್ತದೆ ಎಂಬಂಥ ಮಾತುಗಳು ತಿಳಿಸುತ್ತದೆ.
ಛಾಯಾಗ್ರಹಣ ದಿನದ ಇತಿಹಾಸ:
ಛಾಯಾಗ್ರಹಣ ದಿನದ ಆಚರಣೆಯು ಜನವರಿ 9, 1839 ರಂದು ಫ್ರಾನ್ಸ್ನಲ್ಲಿ ಪ್ರಾರಂಭವಾಯಿತು. ಇದರ ಹಿಂದಿನ ಕಥೆಯೆಂದರೆ, 1839 ರ ಸಮಯದಲ್ಲಿ ಛಾಯಾಗ್ರಹಣ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಇದನ್ನು ಡಾಗ್ರೋಟೈಪ್ ಪ್ರಕ್ರಿಯೆ ಎಂದು ಕರೆಯಲಾಯಿತು.
ಮತ್ತು ಈ ಪ್ರಕ್ರಿಯೆಯನ್ನು ವಿಶ್ವದ ಮೊದಲ ಛಾಯಾಗ್ರಹಣ ಪ್ರಕ್ರಿಯೆ ಎಂದು ಪರಿಗಣಿಸಲಾಗಿದೆ. ಇದನ್ನು ಫ್ರಾನ್ಸ್ ನ ಜೋಸೆಫ್ ನೈಸ್ ಫೋರ್ ಮತ್ತು ಲೂಯಿಸ್ ಡಾಗೆರೆ ಕಂಡುಹಿಡಿದರು. ಇದರ ನಂತರ ಆಗಸ್ಟ್ 19, 1839 ರಂದು ಫ್ರೆಂಚ್ ಸರ್ಕಾರವು ಈ ಛಾಯಾಗ್ರಹಣ ಆವಿಷ್ಕಾರವನ್ನು ಘೋಷಿಸಿ ಅದರ ಪೇಟೆಂಟ್ ನ್ನು ಪಡೆದುಕೊಂಡಿತು. ಇದರ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತಿದೆ.
ಅನೇಕ ಜನರಿಗೆ ಛಾಯಾಗ್ರಹಣವು ಅವರ ಹವ್ಯಾಸವಾಗಿದೆ. 19 ನೇ ಶತಮಾನದ ಆರಂಭದಿಂದಲೂ ಛಾಯಾಗ್ರಹಣದ ಉದ್ಯಮವು ಪ್ರಗತಿಯಲ್ಲಿದೆ ಮತ್ತು ಈ ಉದ್ಯಮವು ಮೈಲಿಗಲ್ಲನ್ನು ಸಾಧಿಸುತ್ತಿದೆ. ಕ್ಯಾಮೆರಾ ತಂತ್ರಜ್ಞಾನದಲ್ಲಿನ ಪ್ರಗತಿಗಳು ಇಂದು ಡಿಜಿಟಲ್ ಫೋಟೋಗ್ರಫಿಗೆ ಕಾರಣಾಗಿದೆ.
ಅಲ್ಲದೆ ಇಂದು ಫೋಟೋಗ್ರಫಿ ಒಂದು ಫ್ಯಾಷನ್ ಆಗಿ ಬದಲಾಗಿದೆ. ಇಂದು ಅದೆಷ್ಟೋ ಛಾಯಾಗ್ರಾಹರು ಈ ಕ್ಷೇತ್ರವನ್ನು ತಮ್ಮ ಉದ್ಯಮವನ್ನಾಗಿ ಮಾಡಿಕೊಂಡು ಹೆಸರುಗಳಿಸಿದ್ದಾರೆ. ಅಂತಹ ಛಾಯಾಗ್ರಹಕರನ್ನು ಗೌರವಿಸಲು ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದವರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಛಾಯಾಗ್ರಹಣ ದಿನದ ಮಹತ್ವ
ವಿಶ್ವ ಛಾಯಾಗ್ರಹಣ ದಿನವು ಛಾಯಾಗ್ರಹಣದ ಕಲೆ ಮತ್ತು ಕರಕುಶಲತೆಯನ್ನು ಮತ್ತು ಈ ಮಾಧ್ಯಮದ ಬಗ್ಗೆ ಜನರು ಹೊಂದಿರುವ ಉತ್ಸಾಹವನ್ನು ಆಚರಿಸುತ್ತದೆ. ಛಾಯಾಗ್ರಹಣದ ಉದ್ದೇಶವು ಹೇಗೆ ವಿಕಸನಗೊಂಡಿತು ಎಂಬುದನ್ನು ಕೂಡ ಈ ದಿನವು ತಿಳಿಸುತ್ತದೆ. ಕಳೆದ ದಶಕದಲ್ಲಿ ಬಹಳಷ್ಟು ಯುವಕರು ಛಾಯಾಗ್ರಹಣವನ್ನು ಹವ್ಯಾಸವಾಗಿ ತೆಗೆದುಕೊಳ್ಳಲು ತಾಂತ್ರಿಕ ಸಾಧನಗಳಲ್ಲಿ ಆದ ಪ್ರಗತಿ ಮತ್ತು ಅವುಗಳ ಬಳಕೆಯ ಸುಲಭತೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಗಸ್ಟ್ 19 ಹೆಚ್ಚು ಮಹತ್ವದ್ದಾಗಿದೆ, ಏಕೆಂದರೆ ಇದು ಹೆಚ್ಚಿನ ಜನರನ್ನು ಛಾಯಾಗ್ರಹಣವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಅಥವಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಲು ಪ್ರೇರೇಪಿಸುತ್ತದೆ.