ಹೊಂದಾಣಿಕೆ ರಾಜಕಾರಣದಿಂದ ಇಂದು ನಾವು ವಿರೋಧ ಪಕ್ಷದಲ್ಲಿದ್ದೇವೆ: ಅರವಿಂದ್ ಲಿಂಬಾವಳಿ!

0
Spread the love

ಬೆಳಗಾವಿ:- ನಿಮ್ಮ ಹೊಂದಾಣಿಕೆ ರಾಜಕಾರಣದಿಂದ ಇಂದು ನಾವು ವಿರೋಧ ಪಕ್ಷಕ್ಕೆ ಬಂದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮಾಜಿ ಸಚಿವ ಅರವಿಂದ್ ಲಿಂಬಾವಳಿ ವಾಗ್ದಾಳಿ ಮಾಡಿದ್ದಾರೆ.

Advertisement

ನಗರದ ಗಾಂಧಿ ಭವನದಲ್ಲಿ ವಕ್ಫ್​ ಭೂ ಕಬಳಿಕೆ ವಿರೋಧಿಸಿ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಅಧ್ಯಕ್ಷ ಮಾಡಿಲ್ಲ‌ ಹುಷಾರ್ ಎಂದು ವಿಜಯೇಂದ್ರಗೆ ಎಚ್ಚರಿಕೆ ಕೊಟ್ಟರು.

ನೀವು ಏನೇನು ಹೊಂದಾಣಿಕೆ ಮಾಡಿಕೊಂಡಿದ್ದೀರಿ ಈಗ ಹೇಳುವುದಿಲ್ಲ. ಸಲಹೆ ತೆಗೆದುಕೊಂಡು ನಿಮ್ಮ ಟೀಮ್ ತಗೊಂಡು ಪ್ರವಾಸ ಮಾಡಿ. ನಮ್ಮ ಜೊತೆ ಬರಲು ಆಗದಿದ್ದರೆ ನೀವೇ ಪ್ರತ್ಯೇಕವಾಗಿ ಹೋರಾಟ ಮಾಡಿ ಎಂದು ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ಬೀದರ್​ದಿಂದ ವಕ್ಫ್​ ಹೋರಾಟ ಮಾಡುತ್ತಿದ್ದೇವೆ. ನಮಗೆ ಕೆಲವರು ಬೆಂಗಳೂರಿನಲ್ಲಿ ಕುಳಿತು ಪಕ್ಷ ವಿರೋಧಿ ಕೆಲಸ ಅಂತಿದ್ದಾರೆ. ನಾವು ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದೇವಾ‌? ನಾವು ಜನಪರ ಹೋರಾಟ ಮಾಡುತ್ತಿದ್ದೇವೆ ನೀವೇನೂ ಮಾಡುತ್ತಿದ್ದೀರಿ.

ಉಪ ಚುನಾವಣೆ ಸೋತ ಮೇಲೆ ಇದನ್ನ ಗಂಭೀರವಾಗಿ ತಗೊಂಡಿಲ್ಲ ಅಂತಾ ಹೇಳ್ಳುತ್ತಾರೆ. ಚುನಾವಣೆ ರಾಜಕೀಯ ಪಕ್ಷಕ್ಕೆ ಗಂಭೀರ ಅಲ್ಲಾ ಅನ್ನೋದಕ್ಕೆ ಏನೂ ಹೇಳಬೇಕು.

ಜನರ ಪರವಾಗಿ ನಾವು ಧ್ವನಿ ಎತ್ತುತ್ತಿದ್ದೇವೆ. ಇದಕ್ಕೆ ಜನ ವಿರೋಧಿ ಅಂತಿರಿ, ಇದಕ್ಕೆ ನಗಬೇಕಾ ಅಳಬೇಕಾ ಗೊತ್ತಾಗುತ್ತಿಲ್ಲ ಎಂದರು.


Spread the love

LEAVE A REPLY

Please enter your comment!
Please enter your name here