HomeGadag Newsಭಯೋತ್ಪಾದಕರ ದಾಳಿ ಖಂಡಿಸಿ ಪಂಜಿನ ಮೆರವಣಿಗೆ

ಭಯೋತ್ಪಾದಕರ ದಾಳಿ ಖಂಡಿಸಿ ಪಂಜಿನ ಮೆರವಣಿಗೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಹೇಯ ಕೃತ್ಯವನ್ನು ಖಂಡಿಸಿ ಪಟ್ಟಣದ ಶ್ರೀ ಅಂಭಾಭವಾನಿ ದೇವಸ್ಥಾನದಿಂದ ಪ್ರಮುಖ ವೃತ್ತಗಳಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ, ನಾಗರಾಜ ಲಕ್ಕುಂಡಿ, ಸಂತೋಷ ಕುರಿ, ಫಕ್ಕೀರೇಶ ರಟ್ಟಿಹಳ್ಳಿ ಮುಂತಾದವರು, ಎಲ್ಲ ಜಾತಿ, ಧರ್ಮದವರು ಒಗ್ಗಟ್ಟಾಗಿರುವ ನಮ್ಮ ದೇಶ ವಿಭಜನೆಯಾಗಬೇಕು ಎಂಬ ಹುನ್ನಾರ ಇಟ್ಟುಕೊಂಡು ಮಾಡಿರುವ ಭಯೋತ್ಪಾದಕರ ದಾಳಿಯನ್ನು ನಾವೆಲ್ಲರೂ ಏಕತೆಯಿಂದ, ಒಗ್ಗಟ್ಟಿನಿಂದ ಖಂಡಿಸಬೇಕೆಂದರು.

ಚಂದ್ರಕಾಂತ ನೂರಶೆಟ್ಟರ, ನಟರಾಜ ರಾನಡೆ, ಪರಶುರಾಮ ಡೊಂಕಬಳ್ಳಿ, ಯಲ್ಲಪ್ಪ ಇಂಗಳಗಿ, ಆನಂದ ಸೊರಟೂರ, ಶರಣು ಹೊಸೂರ, ರಾಮಣ್ಣ ಕಂಬಳಿ, ಮಹಾಂತೇಶ ದಶಮನಿ, ಬಸವರಾಜ ತುಳಿ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್‌ಐ ಚನ್ನಯ್ಯ ದೇವೂರ ಮತ್ತು ಸಿಬ್ಬಂದಿಗಳು ಅಗತ್ಯ ಬಂದೋಬಸ್ತ್ ಕಲ್ಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!