ಪ್ರವಾಸಿ ಜೀಪ್ ಪಲ್ಟಿ: ಕೇರಳ ಮೂಲದ 8 ಮಂದಿಗೆ ಗಾಯ!

0
Spread the love

ಶಿವಮೊಗ್ಗ:- ಕೊಡಚಾದ್ರಿಗೆ ಪ್ರವಾಸಕ್ಕೆ ಹೋಗುತ್ತಿದ್ದ ಜೀಪ್ ಪಲ್ಟಿ ಆಗಿದ್ದು, ಕೇರಳ ಮೂಲದ 8 ಭಕ್ತರಿದ್ದ ಜೀಪ್ ಪಲ್ಟಿ ಹೊಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು – ಕಟ್ಟಿನಹೊಳೆ ಮಾರ್ಗದ ಕುಂಬಳೆ ಬಳಿ ಜರುಗಿದೆ.

Advertisement

ಚಾಲಕನ ನಿಯಂತ್ರಣ ತಪ್ಪಿ ಈ ಜೀಪ್ ಪಲ್ಪಿಯಾಗಿದೆ. ಕೊಲ್ಲೂರಿನಿಂದ ಕೊಡಚಾದ್ರಿಗೆ ಪ್ರವಾಸಿ ಜೀಪ್ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಪಿಯಾಗಿದೆ. ಘಟನೆಯಲ್ಲಿ ಜೀಪ್ ನಲ್ಲಿದ್ದ ಕೇರಳ ಮೂಲದ 8 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ.ಘಟನೆಯಲ್ಲಿ ಸಂಪೂರ್ಣ ಜಖಂ ಆಗಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here