ಚಿಕ್ಕಮಗಳೂರು: ವೀಲ್ಹಿಂಗ್ (wheeling) ಮಾಡಿ ಹುಚ್ಚಾಟ ಮೆರೆದಿದ್ದ ಐವರು ಯುವಕರನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿಝರಿ ಫಾಲ್ಸ್ ಬಳಿ ಬೈಕ್ನಲ್ಲಿ ಪೊಲೀಸಕರು ಬಂಧಿಸಿದ್ದಾರೆ. ಮಂಗಳೂರು ಮೂಲದ ಗಿರೀಶ್, ಗಣೇಶ್, ಗಣೇಶ್ ಭಂಡಾರಿ, ಪ್ರವೀಣ್, ರೋಹಿತ್ ಬಂಧಿತರು. 4 ಬೈಕ್ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ರಾಣಿಝರಿ ಫಾಲ್ಸ್ ರಸ್ತೆಯಲ್ಲಿ ಹುಚ್ಚಾಟ ಮೆರೆದು ಪ್ರವಾಸಿಗರಿಗೆ ಕಿರಿಕಿರಿ ಮಾಡಿದ್ದರು.
ಯುವಕರ ಬೈಕ್ ವೀಲ್ಹಿಂಗ್ ವಿಡಿಯೋ ವೈರಲ್ ಬೆನ್ನಲ್ಲೇ ಬಾಳೂರು ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕಲಂ 281,292 ಬಿಎನ್ಎಸ್ ಅಡಿ ಎಫ್ಐಆರ್ ದಾಖಲಿಸಲಾಗಿತ್ತು.
ಕಾಫಿನಾಡಿನಲ್ಲಿ ಪ್ರವಾಸಿಗರ ಮೋಜುಮಸ್ತಿ ಮುಂದುವರೆದಿದೆ. ಮೂಡಿಗೆರೆ ತಾಲೂಕಿನ ಮೈದಾಡಿ ರಸ್ತೆಯಲ್ಲಿರುವ ಕಿರು ಜಲಪಾತದಲ್ಲಿ ಮೋಜುಮಸ್ತಿ ಮಾಡಿತ್ತಿದ್ದ ಮಂಗಳೂರು ಮೂಲದ 6 ಜನರ ವಿರುದ್ಧ ಕೂಡ ಎಫ್ಐಆರ್ ಹಾಕಲಾಗಿದೆ. ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದರು ಪ್ರವಾಸಿಗರು ಸ್ಪಂದಿಸಿಲ್ಲ. ಹೀಗಾಗಿ ಎಫ್ಐಆರ್ ಹಾಕಲಾಗಿದೆ.