HomeKarnataka Newsಬೆಂಗಳೂರಿನ ಈ ರಸ್ತೆಗಳಲ್ಲಿ ನಾಳೆ ಸಂಚಾರ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ!

ಬೆಂಗಳೂರಿನ ಈ ರಸ್ತೆಗಳಲ್ಲಿ ನಾಳೆ ಸಂಚಾರ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ!

For Dai;y Updates Join Our whatsapp Group

Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ನಾಳೆ ಸಂಚಾರ ಬಂದ್ ಇರಲಿದೆ.

ನಾಳೆ ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮದ ಪ್ರಯುಕ್ತ ಸಾವಿರಾರು ಭಕ್ತರು ಸೇರುವ ನಿರೀಕ್ಷೆಯಿದೆ. ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬದಲಿ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.

ಸಂಚಾರ ನಿರ್ಬಂಧಿಸಿರುವ ರಸ್ತೆಗಳು:

1. ಜ್ಯೋತಿಕೆಫೆ ವೃತ್ತದಿಂದ ರಸಲ್ ಮಾರ್ಕೆಟ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

2. ಬ್ರಾಡ್‌ವೇ ರಸ್ತೆಯಲ್ಲಿ ರಸಲ್ ಮಾರ್ಕೆಟ್ ಕಡೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

3. ಧರ್ಮರಾಜ ಕೋಯಿಲ್ ಸ್ಟ್ರೀಟ್ ಓ.ಪಿ.ಹೆಚ್.ರಸ್ತೆ ವರೆಗೆ ರಸಲ್ ಮಾರ್ಕೆಟ್ ಕಡೆಗೆ ಬರುವ ವಾಹನ ಸಂಚಾರವನ್ನು ತಾಜ್ ವೃತ್ತದಲ್ಲಿ ನಿರ್ಬಂಧಿಸಲಾಗಿರುತ್ತದೆ.

4. ಬಿ.ಆರ್.ವಿ ಜಂಕ್ಷನ್ ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಸೇರಿದಂತೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

5. ಬಾಳೇ ಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಸೇರಿದಂತೆ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಬಂಧಿಸಲಾಗಿರುತ್ತದೆ.

ಸಂಚಾರಕ್ಕೆ ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ.

1. ಅನಿಲ್ ಕುಂಬ್ಳೆ ಜಂಕ್ಷನ್ ಕಡೆಯಿಂದ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಬಿ.ಆರ್.ವಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು- ಸಿ.ಟಿ.ಓ- ಕ್ಲೀನ್ಸ್ ಸರ್ಕಲ್- ಎಂ.ಜಿ ರಸ್ತೆ ಮೂಲಕ ಸಂಚರಿಸಬಹುದಾಗಿರುತ್ತದೆ.

2. ದ್ವಿ ಚಕ್ರ ಹಾಗೂ ಲಘು ಮೋಟಾರ್ ವಾಹನಗಳು ಬಿ.ಆರ್.ವಿ ಸೆಂಟ್ರಲ್ ಸ್ಟ್ರೀಟ್ ಬಲ ತಿರುವು ಸಫೀನಾ ಪ್ಲಾಜಾ ಕಮರ್ಷಿಯಲ್ ಸ್ಟ್ರೀಟ್-ಕಾಮರಾಜ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

3. ದ್ವಿ ಚಕ್ರ ಹಾಗೂ ಲಘು ಮೋಟಾರ್ ವಾಹನಗಳು ಬಿ.ಆರ್.ವಿ-ಸೆಂಟ್ರಲ್ ಸ್ಟ್ರೀಟ್ – ಸೆಲೆಕ್ಟ್ ಜಂಕ್ಷನ್ ಎಡ ತಿರುವು – ರಮಡಾ ಹೋಟೆಲ್-ವಿ.ಎಸ್.ಎನ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!