ಬೆಂಗಳೂರು: ಬೆಂಗಳೂರು ಸಂಚಾರ ಪೊಲೀಸರಿಂದ ಟ್ರಾಫಿಕ್ ದಂಡದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಣೆಗೆ ವಾಹನ ಸವಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಗಸ್ಟ್ 23ರಿಂದ ಸೆಪ್ಟೆಂಬರ್ 12, 2025ರವರೆಗೆ ಈ ಯೋಜನೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ವಾಹನ ಮಾಲೀಕರು ತಮ್ಮ ಬಾಕಿ ದಂಡವನ್ನು ಅರ್ಧದಷ್ಟು ಮೊತ್ತದಲ್ಲಿ ಪಾವತಿಸಬಹುದಾಗಿದೆ. ಕೇವಲ 13 ದಿನಗಳಲ್ಲಿ 12,70,000ಕ್ಕೂ ಹೆಚ್ಚು ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳು ಇತ್ಯರ್ಥಗೊಂಡಿವೆ.
ಈ ಮೂಲಕ ಬರೋಬ್ಬರಿ ₹35 ಕೋಟಿ 73 ಲಕ್ಷ ರೂಪಾಯಿಗಳ ದಂಡ ಸಂಗ್ರಹವಾಗಿದೆ. ಆಗಸ್ಟ್ 23ರಿಂದ ಆಗಸ್ಟ್ 28ರವರೆಗಿನ ಆರು ದಿನಗಳಲ್ಲಿ ₹18.95 ಕೋಟಿ ಸಂಗ್ರಹವಾಗಿತ್ತು, ಮತ್ತು ಆಗಸ್ಟ್ 29ರಿಂದ ಸೆಪ್ಟೆಂಬರ್ 3ರವರೆಗೆ ಒಟ್ಟು ₹31.87 ಕೋಟಿಗೆ ತಲುಪಿತ್ತು. ಸೆಪ್ಟೆಂಬರ್ 4ರ ವೇಳೆಗೆ ಒಟ್ಟು ₹35.73 ಕೋಟಿ ದಂಡ ವಸೂಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 23ರಿಂದ ದಂಡ ವಸೂಲಿಗೆ 50% ಡಿಸ್ಕೌಂಟ್ ನೀಡಲಾಗಿತ್ತು. ಈ ಆಫರ್ ಸೆಪ್ಟೆಂಬರ್ 12ರ ವರೆಗೆ ಇರಲಿದ್ದು, ಇನ್ನಷ್ಟು ಕೋಟಿ ಸಂಗ್ರಹವಾಗೋ ನಿರೀಕ್ಷೆಯಿದೆ.