ಬೆಂಗಳೂರು:- ಇಂದು ನಗರದ ಕೆಲವು ರಸ್ತೆಗಳಲ್ಲಿ ಕೆಲ ಕಾರಣಾಂತರಗಳಿಂದ ಸಾರ್ವಜನಿಕ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು.
ಎನ್ಆರ್ ಜಂಕ್ಷನ್, ಹೂಡಿ ಜಂಕ್ಷನ್, ಶಿವಾಜಿನಗರ ಮತ್ತು ನಾಯಂಡಹಳ್ಳಿ ಸೇರಿದಂತೆ ಇತರೆ ನಗರಗಳಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು, ಆಯಾ ಠಾಣಾ ವ್ಯಾಪ್ತಿಯ ಸಂಚಾರಿ ಪೋಲಿಸರು ಸಂಚಾರ ಸಲಹೆ ನೀಡುವ ಮೂಲಕ ದಯವಿಟ್ಟು ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಎನ್ಆರ್ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಟೌನ್ ಹಾಲ್ ಕಡೆಗೆ ನಿಧಾನಗತಿಯ ಸಂಚಾರವಿದೆ. ದಯಮಾಡಿ ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸ್ ಕೋರಿದ್ದಾರೆ.
ಗುರಪ್ಪನಪಾಳ್ಯ ಜಂಕ್ಷನ್ನಲ್ಲಿ ನೀರು ನಿಂತಿರುವುದರಿಂದ ಸಾಗರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಬಾಬುಸಪಾಳ್ಯ ಬಳಿ ವಾಹನವೊಂದು ಕೆಟ್ಟು ನಿಂತ್ತಿದ್ದ ಪರಿಣಾಮ ಹೆಬ್ಬಾಳ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಅದೇ ರೀತಿಯಾಗಿ ವರ್ತೂರು ಸರ್ಕಾರಿ ಪಿ.ಯು ಕಾಲೇಜ್ ಬಳಿ ರಸ್ತೆ ತುಂಬಾ ನೀರು ನಿಂತ ಪರಿಣಾಮ ನಿಧಾನಗತಿ ಸಂಚರಿಸುವಂತೆ ಸಂಚಾರಿ ಪೋಲಿಸರು ಸಲಹೆ ನೀಡಿದ್ದರು.
ಇನ್ನೂ ಸಂಚಾರ ಪೊಲೀಸರು ಸಂಚಾರ ನಿಯಮಗಳನ್ನು ಪಾಲಿಸಲು ಮತ್ತು ಸುರಕ್ಷಿತವಾಗಿ ಚಾಲನೆ ಮಾಡಲು ಜನರನ್ನು ಕೋರಿದ್ದಾರೆ.