RCB Vs GT: ಆರ್ ಸಿಬಿ ಅಭಿಮಾನಿಗೆ ಬಿಗ್ ಶಾಕ್- ನಡುರೋಡಲ್ಲಿ ಮ್ಯಾಚ್ ನೋಡುತ್ತಿದ್ದ ಸವಾರನಿಗೆ ಬಿತ್ತು ದಂಡ!

0
Spread the love

ಬೆಂಗಳೂರು:- ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಬುಧವಾರ ಜಿದ್ದಾಜಿದ್ದಿನ ಫೈಟ್ ಇತ್ತು. ಈ ಪಂದ್ಯದಲ್ಲಿ ಬೆಂಗಳೂರು ವಿರುದ್ಧ GT ಗೆದ್ದು ಬೀಗಿತ್ತು.

Advertisement

ಆದರೆ ಈ ಪಂದ್ಯವನ್ನು ನಡುರಸ್ತೆಯಲ್ಲಿ ಫೋನ್ ನಲ್ಲಿ ನೋಡುತ್ತಿದ್ದ ಕ್ರಿಕೆಟ್ ಅಭಿಮಾನಿ ಓರ್ವನಿಗೆ ಸಂಚಾರಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ನಿನ್ನೆ ಸಂಜೆ ದ್ವಿಚಕ್ರ ವಾಹನ ಚಾಲಕರೊಬ್ಬರು ಮೊಬೈಲ್‌ನಲ್ಲಿ RCB ಪಂದ್ಯ ವೀಕ್ಷಿಸಿದ್ದಾರೆ. ಇದನ್ನು ಹಿಂದೆ ಗಾಡಿ ಓಡಿಸುತ್ತಿದ್ದ ವಾಹನ ಸವಾರರು ವಿಡಿಯೋ ಮಾಡಿದ್ದರು.

ಇತ್ತೀಚೆಗೆ ಬೈಕ್ ರೈಡ್ ವೇಳೆ ಮೊಬೈಲ್‌ನಲ್ಲಿ ಐಪಿಎಲ್ ಮ್ಯಾಚ್ ನೋಡೋದು ಹೆಚ್ಚಾಗುತ್ತಿದೆ. ಹೀಗಾಗಿ ಈ ವಿಡಿಯೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿತ್ತು.

ಈ ವಿಡಿಯೋ ಆಧಾರದಲ್ಲಿ ಶಿವಾಜಿನಗರ ಪೊಲೀಸರು ವಾಹನ ಸವಾರನನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆಸಿದ್ದಾರೆ. ವಿಡಿಯೋದ ಆಧಾರದಲ್ಲಿ ಚಾಲಕನಿಗೆ 1500 ರೂಪಾಯಿ ದಂಡ ಹಾಕಿ ತಿಳುವಳಿಕೆ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here