ಕ್ಯಾಬ್​ ಡ್ರೈವರ್​​ಗೆ​​​ ಕಪಾಳಮೋಕ್ಷ ಮಾಡಿದ ಟ್ರಾಫಿಕ್​​​ ಪೊಲೀಸ್: ವಿಡಿಯೋ ವೈರಲ್!

0
Spread the love

ಬೆಂಗಳೂರು:- ಕ್ಯಾಬ್​ ಡ್ರೈವರ್​​ ಮೇಲೆ ಟ್ರಾಫಿಕ್​​ ಪೊಲೀಸ್​​​ ಹಲ್ಲೆ ನಡೆಸಿರುವ ಘಟನೆ ನಗರದ ಶೆಲ್ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಆರ್‌ಟಿ ನಗರ ಫ್ಲೈಓವರ್ ಬಳಿ ಜರುಗಿದೆ.

Advertisement

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಬಹಳಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಟ್ರಾಫಿಕ್​​ ಪೊಲೀಸ್​​​​​ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಯಾಬ್ ಚಾಲಕ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದಕ್ಕೆ ಟ್ರಾಫಿಕ್​ ಪೊಲೀಸ್​​​ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾದ ನಡೆದಿದೆ. ಕೋಪಗೊಂಡ ಪೊಲೀಸ್​​ ಸಾರ್ವಜನಿಕರ ಮುಂದೆ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋವನ್ನು ಎಕ್ಸ್​​ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಈ ಗೂಂಡಾ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕಮೆಂಟ್​​ ಮಾಡಿದ್ದಾರೆ.

ಬೆಂಗಳೂರು ಟ್ರಾಫಿಕ್​​ ಪೊಲೀಸರು ತಾವು ಮಾಡಬೇಕಾದ ಕೆಲಸ ಬಿಟ್ಟು ಬೇರೆಲ್ಲ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇಷ್ಟೊಂದು ಟ್ರಾಫಿಕ್, ಅದರಿಂದ ಆಗುತ್ತಿರುವ ಅಪಘಾತಗಳು, ಇದನ್ನು ಸರಿ ಮಾಡುವುದು ಬಿಟ್ಟು, ಸಾರ್ವಜನಿಕರ ಮೇಲೆ ದರ್ಪ ತೋರಿಸುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.


Spread the love

LEAVE A REPLY

Please enter your comment!
Please enter your name here