ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ! ಪರ್ಯಾಯ ಮಾರ್ಗ ಇಲ್ಲಿದೆ!

0
Spread the love

ಬೆಂಗಳೂರು:- ಇಂದು ಕರ್ನಾಟಕ ಸೇರಿ ದೇಶದಾದ್ಯಂತ ಕ್ರಿಸ್ ಮಸ್ ಹಬ್ಬದ ಸಂಭ್ರಮ. ಹೀಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಹಜವಾಗಿ ಜನದಟ್ಟಣೆ ಹೆಚ್ಚಾಗಲಿದೆ.

Advertisement

ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು, ಸುಗಮ ಸಂಚಾರಕ್ಕಾಗಿ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ ಮತ್ತು ವಾಹನ ನಿಲುಗಡೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ರಿಚರ್ಡ್ ಪಾರ್ಕ್ ಹತ್ತಿರ ಡೇವಿಸ್ ರಸ್ತೆಯಲ್ಲಿರುವ ಹೋಲಿ ಗೋಸ್ಟ್ ಚರ್ಚ್​ಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಹೀಗಾಗಿ ಈ ಕೆಳಕಂಡ ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಸಂಚಾರ ನಿರ್ಬಂಧ:
ಡೇವಿಸ್ ರಸ್ತೆಯಲ್ಲಿ ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಿಂದ ಕುಕ್ಸನ್ ರಸ್ತೆ ಜಂಕ್ಷನ್‌ ವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ವ್ಯವಸ್ಥೆ:
ಡೇವಿಸ್ ರಸ್ತೆ ಕಡೆಯಿಂದ ಹೆಚ್​​.ಎಂ ರಸ್ತೆ ಕಡೆಗೆ ಸಂಚರಿಸುವವರು ಡೇವಿಸ್ ರಸ್ತೆಯಲ್ಲಿ ಜಾನ್ ಆರ್ಮ್‌ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನೇರವಾಗಿ ಸಾಗಿ ವಿವಿಯಾನಿ ರಸ್ತೆಯಲ್ಲಿ ಎಡತಿರುವು ಪಡೆದು ನೇರವಾಗಿ ಸಂಚರಿಸಿ ಕುಕ್ಸನ್ ರಸ್ತೆಯಲ್ಲಿ ಎಡತಿರುವು ಪಡೆದು ಡೇವಿಸ್ ರಸ್ತೆ ತಲುಪಿ ನಂತರ ಡೇವಿಸ್ ರಸ್ತೆಯಲ್ಲಿ ಸ್ಮೃತಿರುವು ಪಡೆದು ಹೆಚ್.ಎಂ ರಸ್ತೆ ಕಡೆಗೆ ಹೋಗಬಹುದಾಗಿದೆ.

ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು:
ಡೇವಿಸ್ ರಸ್ತೆ, ಬಾಣಸವಾಡಿ ಮುಖ್ಯರಸ್ತೆ, ವೀಲ್ಡರ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ, ಹೇನ್ ರಸ್ತೆ ಮತ್ತು ಪ್ರಾಮಿನೇಡ್ ರಸ್ತೆಯಲ್ಲಿ ಎಲ್ಲಾ ರೀತಿ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಮನಾಕ್ಷಿ ಕೋಯಿಲ್ ಸ್ಟ್ರೀಟ್ (ಶಿವಾಜಿ ಸರ್ಕಲ್‌ನಿಂದ ಓ.ಪಿ.ಹೆಚ್. ರಸ್ತೆಯವರೆಗೆ), ಸೆಂಟ್ರಲ್ ಸ್ಟ್ರೀಟ್ ರಸ್ತೆ (ಸೆಂಟ್ರಲ್ ಸ್ಟ್ರೀಟ್ ಜಂಕ್ಷನ್‌ನಿಂದ ಜ್ಯೋತಿ ಕೆಫೆ ಜಂಕ್ಷನ್‌ವರೆಗೆ), ಸೆಂಟ್ರಲ್ ಸ್ಪೀಟ್ ರಸ್ತೆ (ಜ್ಯೋತಿ ಕೆಫೆ ಜಂಕ್ಷನ್‌ನಿಂದ ಸಲೆಕ್ಟ್ ಹೋಟೆಲ್‌ವರೆಗೆ) ಮತ್ತು ನರೋನಾ ರಸ್ತೆ (ಚರ್ಚ್ ನರೋನಾ ರಸ್ತೆಯಿಂದ ಆರ್.ಎಂ.ಎಸ್ ಜಂಕ್ಷನ್‌ ವರೆಗೆ) ವಾಹನ ನಿಲುಗಡೆ ನಿಷೇಧಿಸಲಾಗಿದೆ.


Spread the love

LEAVE A REPLY

Please enter your comment!
Please enter your name here