ಚಿತ್ರದುರ್ಗ:- ಇಲ್ಲಿನ ಜೋಗಿಮಟ್ಟಿ ರಸ್ತೆಯ ನಾಲ್ಕನೇ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ 3 ವರ್ಷದ ಪುಟ್ಟ ಕಂದಮ್ಮ ಪ್ರಾಣಬಿಟ್ಟ ಘಟನೆ ಜರುಗಿದೆ. 3 ವರ್ಷದ ಅರತ್ ಬೋರ ಮೃತ ಮಗು. ತಂದೆಯ ಜೊತೆ ಶಾಲೆಗೆ ತೆರಳುತ್ತಿದ್ದ ವೇಳೆ ಓವರ್ ಟೇಕ್ ಮಾಡಲು ಹೋಗಿ ಈ ದುರ್ಘಟನೆ ನಡೆದಿದೆ.
Advertisement
ಟಾಟಾ ಏಸ್ಗೆ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಬೈಕ್ ಜಲ್ಲಿ ರಾಶಿಯ ಮೇಲೆ ಬಿದ್ದಿದೆ. ಇದೇ ವೇಳೆ ಹಿಂಬದಿಯಿಂದ ಬಂದ ಟಾಟಾ ಏಸ್ ರಸ್ತೆ ಮೇಲೆ ಬಿದ್ದ ಮಗುವಿನ ಮೇಲೆ ಹರಿದಿದೆ. ಗಂಭಿರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಮೃತಪಟ್ಟಿದೆ.