ಬೀದಿನಾಯಿ, ಬಿಡಾಡಿ ದನಗಳಿಂದ ದುರ್ಘಟನೆ: ಕ್ರಮಕ್ಕೆ ಒತ್ತಾಯಿಸಿ ಧ್ವನಿ ಎತ್ತಿದ ವಿ.ಪ ಸದಸ್ಯ ಎಸ್.ವಿ. ಸಂಕನೂರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ/ಬೆಳಗಾವಿ: ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಸಂಖ್ಯೆ ಮಿತಿಮೀರಿದ್ದು, ಜನರ ಪ್ರಾಣಕ್ಕೆ ಹಾನಿ ಆಗುತ್ತಿದೆ. ಅವುಗಳನ್ನು ನಿಯಂತ್ರಿಸಲು ಸಂಬAಧಪಟ್ಟವರಿಗೆ ನಿರ್ದೇಶನ ನೀಡಲು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಬೆಳಗಾವಿಯ ಅಧಿವೇಶನದಲ್ಲಿ ಧ್ವನಿ ಎತ್ತಿದರು.

Advertisement

ಇತ್ತೀಚೆಗೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ವಿರೇಶ ದೊಡ್ಡಕಾಳೆ ಎಂಬ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಪ್ರಾಣಾಪಾಯ ಉಂಟಾಗಿರುವುದು ಸಾರ್ವಜನಿಕರನ್ನು ಭಯಭೀತರನ್ನಾಗಿ ಮಾಡಿದೆ. ಅದೇ ರೀತಿ ಧಾರವಾಡದಲ್ಲಿಯೂ ಸಹ ನಾಯಿಗಳ ದಾಳಿಯಿಂದ ಒಂದು ಮಗು ರೇಬಿಸ್ ರೋಗಕ್ಕೆ ತುತ್ತಾಗಿದೆ.

ನಾಯಿಗಳ ಹಾವಳಿ ಅಲ್ಲದೇ ನಗರ ಹಾಗೂ ಶಹರದ ಪ್ರಮುಖ ಬೀದಿಗಳಲ್ಲಿ ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿರುವುದು ಕಂಡುಬಂದಿದೆ. ಕೆಲವು ತಿಂಗಳುಗಳ ಹಿಂದೆ ಬೆಟಗೇರಿ ಭಾಗದಲ್ಲಿ ದನಗಳ ಗುದ್ದಾಟದಿಂದ ಓರ್ವ ವೃದ್ಧ ಮೃತಪಟ್ಟಿರುವುದು, ಧಾರವಾಡದಲ್ಲಿ ಬಿಡಾಡಿ ದನಗಳ ಗುಂಪು ಮಲಗಿದ್ದು ತಪ್ಪಿಸಲು ಹೋಗಿ ಅಟೋ ಮತ್ತು ಲಾರಿ ನಡುವೆ ಡಿಕ್ಕಿ ಆಗಿ ಮೂವರು ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆಗಳಾಗಿವೆ.

ಈ ಎಲ್ಲ ವಿಚಾರಗಳನ್ನು ಸದನದ ಶೂನ್ಯ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಪ್ರಸ್ತಾಪಿಸಿ, ಪೌರಾಡಳಿತ ಸಚಿವರಿಗೆ ಆಯಾ ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಆಯಕ್ತರಿಗೆ ಸೂಕ್ತ ಸೂಚನೆ ನೀಡಿ ಮುಂಬರುವ ದಿನಗಳಲ್ಲಿ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳನ್ನು ನಿಯಂತ್ರಿಸಿ ಆಗುವ ಅನಾಹುತಗಳನ್ನು ತಪ್ಪಿಸಲು ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here