ಕೋಲಾರ: ಜಿಲ್ಲೆಯ ಬಂಗಾರಪೇಟೆಯಲ್ಲಿ ಮತದಾನದ ವೇಳೆ ದುರ್ಘಟನೆ ಸಂಭವಿಸಿ ಮತದಾನ ಮಾಡಲು ಬಂದ ವೃದ್ಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜರುಗಿದೆ.
ಹೂಗಳ ಸೀನಪ್ಪ ಮೃತ ವೃದ್ದ. ಬಂಗಾರಪೇಟೆ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆಯುತ್ತಿದ್ದಾಗ, ಬಿ ವರ್ಗದ ಮತದಾರರಾಗಿದ್ದ ಸೀನಪ್ಪ ಅವರು 8 ಮತಗಳಲ್ಲಿ 2 ಮತಗಳನ್ನು ಚಲಾಯಿಸಿ, ಉಳಿದ ಮತಗಳನ್ನು ಹಾಕಲು ಮತ್ತೊಂದು ಮತಗಟ್ಟೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದೆ.
ಮಾದರಿ ಕನ್ನಡ ಶಾಲೆಯ ಮತಗಟ್ಟೆ ಬಳಿಯೇ ಅವರು ಕುಸಿದು ಬಿದ್ದು ಮೃತಪಟ್ಟಿದ್ದು, ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಬೆನ್ನಲ್ಲೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.



