ಸರ್ಕಾರಿ ಆಸ್ಪತ್ರೆಯಲ್ಲಿ ದುರಂತ: ನೀರಿನ ಸಂಪ್​ಗೆ ಬಿದ್ದು 3 ವರ್ಷದ ಮಗು ದುರ್ಮರಣ!

0
Spread the love

ಶಿವಮೊಗ್ಗ:- ಸರ್ಕಾರಿ ಆಸ್ಪತ್ರೆಯಲ್ಲಿ ದುರಂತ ಒಂದು ಸಂಭವಿಸಿದ್ದು, ನೀರಿನ ಸಂಪ್​ಗೆ ಬಿದ್ದು 3 ವರ್ಷದ ಮಗು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಶಿಕಾರಿಪುರ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಜರುಗಿದೆ.

Advertisement

3 ವರ್ಷದ ಮೊಹಮ್ಮದ್ ಐಯಾನ್ ಮೃತ ಮಗು ಎಂದು ಗುರುತಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮೊಹಮ್ಮದ್ ಐಯಾನ್ ಎಂಬ ಮಗು ಆಟವಾಡುತ್ತಿದ್ದ ವೇಳೆ ತುಂಬಿದ್ದ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಮುಚ್ಚಳ ಮುಚ್ಚದಿದ್ದಕ್ಕೆ ತೊಟ್ಟಿಗೆ ಬಿದ್ದು ಮಗು ಸಾವು ಎಂದು ಆರೋಪ ಮಾಡಲಾಗಿದೆ. ಮಗು ಮೃತಪಟ್ಟ ನಂತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

LEAVE A REPLY

Please enter your comment!
Please enter your name here