ಹೈದರಾಬಾದ್:- ಕೃಷ್ಣ ಜನ್ಮಾಷ್ಟಮಿಯಂದೇ ದುರಂತ ಸಂಭವಿಸಿದ್ದು, ರಥಕ್ಕೆ ವಿದ್ಯುತ್ ತಂತಿ ತಗುಲಿ ಐವರು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ಜರುಗಿದೆ.
21 ವರ್ಷದ ಕೃಷ್ಣಯಾದವ್, 34 ವರ್ಷದ ಸುರೇಶ್ ಯಾದವ್, 35 ವರ್ಷದ ಶ್ರೀಕಾಂತ್ ರೆಡ್ಡಿ, 39 ವರ್ಷದ ರುದ್ರ ವಿಕಾಸ್, 45 ವರ್ಷದ ರಾಜೇಂದ್ರ ರೆಡ್ಡಿ ಮೃತರು. ರಾಮಂತಪುರದ ಗೋಕುಲನಗರದಲ್ಲಿ ತಡರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಅವಘಡದಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.



