ಬಾಗಲಕೋಟೆ:- ಇಲ್ಲಿನ ಸೀತಿಮನಿ ಗ್ರಾಮದ ಬಳಿ ಇರುವ ಕೃಷ್ಣಾ ನದಿಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಯುಗಾದಿ ಹಬ್ಬದ ದಿನವೇ ಈ ದುರಂತ ಸಂಭವಿಸಿದೆ.
15 ವರ್ಷದ ಸೋಮಶೇಖರ್ ದೇವರಮನಿ, 17 ವರ್ಷದ ಪರನಗೌಡ ಬೀಳಗಿ, 16 ವರ್ಷದ ಮಲ್ಲಪ್ಪ ಬಗಲಿ ಮೃತರು.
ಬಾಲಕ ಸೋಮಶೇಖರ್‌ನ ಮೃತದೇಹ ಪತ್ತೆಯಾಗಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದಿಂದ ಉಳಿದ ಬಾಲಕರಿಗಾಗಿ ಹುಡುಕಾಟ ನಡೆದಿದೆ.



