HomeCrime Newsಬಳ್ಳಾರಿಯಲ್ಲಿ ತಾಯಿ, ಇಬ್ಬರು ಮಕ್ಕಳ ದಾರುಣ ಸಾವು! ತುಂಗಭದ್ರಾ ಕಾಲುವೆಯಲ್ಲಿ ಮೂವರ ಮೃತದೇಹ ಪತ್ತೆ

ಬಳ್ಳಾರಿಯಲ್ಲಿ ತಾಯಿ, ಇಬ್ಬರು ಮಕ್ಕಳ ದಾರುಣ ಸಾವು! ತುಂಗಭದ್ರಾ ಕಾಲುವೆಯಲ್ಲಿ ಮೂವರ ಮೃತದೇಹ ಪತ್ತೆ

For Dai;y Updates Join Our whatsapp Group

ಬಳ್ಳಾರಿ: ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ತಾಯಿಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ನಗರದ ಅಲ್ಲಿಪುರ ಸಮೀಪ ನಡೆದಿದೆ. ಮೃತರನ್ನು ನಗರದ ಮಿಲ್ಲರ್ ಪೇಟೆ ನಿವಾಸಿ ಲತೀಪಾ ಸಿಮ್ರಾನ್ (29) ಹಾಗೂ ಅವರ ಮಕ್ಕಳಾದ ಮಹಮ್ಮದ್ ಅಯಾನ್ (3) ಮತ್ತು ಆಯಿಷಾ ಫಾತಿಮಾ (2) ಎಂದು ಗುರುತಿಸಲಾಗಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ಲತೀಪಾ ಸಿಮ್ರಾನ್ ತಮ್ಮ ಇಬ್ಬರು ಮಕ್ಕಳನ್ನು ಒಂದೇ ವೇಲ್‌ನಲ್ಲಿ ಕಟ್ಟಿ ತುಂಗಭದ್ರಾ ಕಾಲುವೆಗೆ ಎಸೆದು, ಬಳಿಕ ತಾವೂ ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ.

ಇಂದು ಬೆಳಗ್ಗೆ ಲತೀಪಾ ಸಿಮ್ರಾನ್ ಅವರ ಮೃತದೇಹ ಪತ್ತೆಯಾಗಿದ್ದು, ನಂತರ ಕರ್ನಾಟಕದ ಗಡಿಭಾಗದ ನಾಗಲಾಪುರ ಸಮೀಪ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

ಲತೀಪಾ ಸಿಮ್ರಾನ್ ಅವರ ಸಾವಿಗೆ ಪತಿ ಸದ್ದಾಂ ಹುಸೇನ್ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ವರದಕ್ಷಿಣೆ ತರುವಂತೆ ಒತ್ತಾಯಿಸಿ ಪತಿ ನಿತ್ಯ ಹಲ್ಲೆ ನಡೆಸುತ್ತಿದ್ದ. ಅಲ್ಲದೆ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ದೂರಿದ್ದಾರೆ.

ಪತಿಯ ಕಿರುಕುಳದಿಂದ ತೀವ್ರವಾಗಿ ನೊಂದಿದ್ದ ಲತೀಪಾ ಸಿಮ್ರಾನ್, ತಾವು ಇಲ್ಲದಿದ್ದರೆ ಮಕ್ಕಳಿಗೂ ಕಿರುಕುಳ ನೀಡಬಹುದು ಎಂಬ ಆತಂಕದಲ್ಲಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ಕಾರಣದಿಂದ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಮೃತ ಮಹಿಳೆಯ ಪತಿ ಸದ್ದಾಂ ಹುಸೇನ್ ಸೇರಿದಂತೆ ಒಟ್ಟು ಆರು ಮಂದಿ ವಿರುದ್ಧ ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರು ಮಾಡಿರುವ ಆರೋಪಗಳು ಹಾಗೂ ಘಟನೆಗೆ ಕಾರಣವಾದ ಸನ್ನಿವೇಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img