ಸರ್ಕಾರದ ಪರಿಸ್ಥಿತಿಯನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಿ: ಡಿ.ಕೆ.ಶಿವಕುಮಾರ್

0
Spread the love

ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಸಾರಿಗೆ ಬಂದ್​ ಎಫೆಕ್ಟ್ ಜನರಿಗೆ ತಟ್ಟಿದೆ. ಇನ್ನೂ ಈ ವಿಚಾರವಾಗಿ ನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೇ ನೀಡಿದ್ದು ನಗರದಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ಕೇಳಿರುವ ಬೇಡಿಕೆಯಲ್ಲಿ ತಪ್ಪಿಲ್ಲ.

Advertisement

ಸಾರಿಗೆ ನೌಕರರು ಹಠ ಮಾಡೋದು ಸರಿಯಲ್ಲ. ನೌಕರರು ಸಹಕಾರ ಕೊಡಬೇಕು. ಸಾರಿಗೆ ನೌಕರರ ಜೊತೆ ಸಿಎಂ, ಸಚಿವರು ಸಭೆ ಮಾಡಿದ್ದಾರೆ. ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಗಮನದಲ್ಲಿಟ್ಟುಕೊಳ್ಳಬೇಕು. ನಾಗರಿಕರ ವಿಚಾರವನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.

ಈಡೇರಿಸಲಾಗದ ಬೇಡಿಕೆಯನ್ನ ಈಡೇರಿಸಿ ಅನ್ನೋದು ಸರಿಯಲ್ಲ. ಸಾರ್ವಜನಿಕರ ಹಿತ ಮುಖ್ಯ, ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಿ. ಹಠ ಮಾಡೋದು ಅರ್ಥ ಇಲ್ಲ. ಕೆಲವು ಸಾರಿಗೆ ನೌಕರರು ಕೆಲಸಕ್ಕೆ ಬಂದಿದ್ದಾರೆ. ಅವರಿಗೆಲ್ಲ ಅಭಿನಂದನೆ ಎಂದು ಹೇಳಿದ್ದಾರೆ.

 

 

 


Spread the love

LEAVE A REPLY

Please enter your comment!
Please enter your name here