ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ದ ಸಮರಕ್ಕೆ ಸಾರಿಗೆ ನೌಕರರು ಸಜ್ಜಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಆಗಸ್ಟ್ 5 ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸಾರಿಗೆ ನೌಕರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರಕ್ಕೆ ಟಕ್ಕರ್ ಕೊಡಲು ರಾಜ್ಯ ಸರ್ಕಾರವು ಸಹ ಮುಂದಾಗಿದೆ.
ಹೌದು ಬಸ್ಗಳ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಸಾರಿಗೆ ನೌಕರರಿಗೆ ಟಕ್ಕರ್ ಕೊಡಲು ರಾಜ್ಯ ಸರ್ಕಾರ ಮುಂದಾಗಿದ್ದು ಖಾಸಗಿ ಬಸ್ ಮಾಲೀಕರ ಜೊತೆ ಸಭೆ ಕರೆದ ಸಾರಿಗೆ ಇಲಾಖೆ ಆಯುಕ್ತರು ಇಂದು ಮಧ್ಯಾಹ್ನ 12 ಗಂಟೆಗೆ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಮುಷ್ಕರ ನಡೆದ್ರೂ ಸಾರ್ವಜನಿಕರಿಗೆ ತೊಂದ್ರೆಯಾಗದಂತೆ ಕ್ರಮ ಹಾಗೂ ಪರ್ಯಾಯ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ.
ಸಾರಿಗೆ ನೌಕರರು ಮುಷ್ಕರ ನಡೆಸಿದ್ರೂ ಖಾಸಗಿ ಚಾಲಕರ ಮೂಲಕ ಬಸ್ ಓಡಿಸಲು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸರ್ಕಾರಿ ಬಸ್ ಗಳಿಗೆ ಖಾಸಗಿ ಬಸ್ ಚಾಲಕರನ್ನ ಬಳಸಿಕೊಳ್ಳಬಹುದು. ಸಾರಿಗೆ ನೌಕರರು ಮುಷ್ಕರ ಮಾಡದಂತೆ ತಡೆಯಲು ಮುಂದಾದ ಬಿಎಂಟಿಸಿ ಮುಂದಾಗಿದೆ. ಬಿಎಂಟಿಸಿಯು ಡ್ಯೂಟಿ ರೋಟಾಗೆ ನೌಕರರ ಕೌನ್ಸಿಲಿಂಗ್ ಕರೆದಿದೆ. ಬಿಎಂಟಿಸಿ ನಡೆಗೆ ಸಾರಿಗೆ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದೆ.