ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಲೋಕಸಭಾ ಚುನಾವಣೆ ಕಾವು ಪಡೆಯುತ್ತಿರುವುದು ಒಂದೆಡೆಯಾದರೆ, ಮೋದಿ ಅಭಿಮಾನಿ, ಶ್ರೀರಾಮುಲು ಆಪ್ತ ಹಾಗೂ ರೋಣ ಮತಕ್ಷೇತ್ರದ ಬಿಜೆಪಿ ಮುಖಂಡ ಅಂದಪ್ಪ ಸಂಕನೂರ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಬೈಕ್ ಮೂಲಕ ತೆರಳಿದ್ದಾರೆ.
Advertisement
ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಶ್ರೀರಾಮುಲು, ಹಾವೇರಿ-ಗದಗ ಲೋಕಸಭಾ ಬಸವರಾಜ ಬೊಮ್ಮಾಯಿ ಸೇರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಶ್ರೀರಾಮನಿಗೆ ವಿಶೇಷ ಪೂಜೆ ಮಾಡಿಸಲು ಪಟ್ಟಣದಿಂದ ಬಿಜಾಪೂರ, ಸೋಲ್ಹಾಪೂರ, ನಾಗ್ಪುರ ಮೂಲಕ ಅಯೋಧ್ಯೆಗೆ ಪ್ರತಿದಿನ 400-500 ಕಿಮಿ ಪ್ರಯಾಣದ ಸಿದ್ಧತೆಯೊಂದಿಗೆ ಸಂಗಡಿಗ ಕಿರಣ ಬಂಡೆಹಾಳ ಅವರೊಂದಿಗೆ ತೆರಳಿದರು.