ಧಾರವಾಡ: ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದ ಪರಿಣಾಮ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರೀ ದುರಂತ ತಪ್ಪಿರುವ ಘಟನೆ ಧಾರವಾಡದ ಸುಭಾಷ ರಸ್ತೆಯಲ್ಲಿ ಜರುಗಿದೆ.
Advertisement
ಘಟನೆಯಲ್ಲಿ ಆಟೋ ಚಾಲಕ ಹಾಗೂ ವೃದ್ಧೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಧಾರವಾಡದ ಸುಭಾಷ ರಸ್ತೆಯ ಮೂಲಕ ಆಟೋ ತೆರಳುತ್ತಿತ್ತು. ಈ ವೇಳೆ ರಸ್ತೆಯ ಪಕ್ಕ ಇದ್ದ ಮರ ಏಕಾಏಕಿ ಚಲಿಸುತ್ತಿದ್ದ ಆಟೋ ಮೇಲೆಯೇ ಬಿದ್ದಿದೆ. ಕೂಡಲೇ ಸ್ಥಳೀಯರು ಆಟೋದ ಒಳಗಿದ್ದ ಚಾಲಕ ಹಾಗೂ ವೃದ್ಧೆಯನ್ನು ಹೊರ ತೆಗೆದಿದ್ದಾರೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಧಾರವಾಡ ಸಂಚಾರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮರ ತೆರವುಗೊಳಿಸುವ ಕಾರ್ಯ ಮಾಡಿದರು. ಘಟನೆಯಿಂದ ಆಟೋದ ಮೇಲ್ಭಾಗ ಜಖಂಗೊಂಡಿದೆ.