ಹುಲಿ ದಾಳಿಗೆ ಆದಿವಾಸಿ ವ್ಯಕ್ತಿ ಬಲಿ

0
Spread the love

ಚಾಮರಾಜನಗರ: ಹುಲಿಗಳ ನಾಡು ಎಂದೇ ಖ್ಯಾತಿ ಪಡೆದಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿ ದಾಳಿಗೆ ಆದಿವಾಸಿ ವ್ಯಕ್ತಿ ಬಲಿಯಾಗಿರುವ ಘಟನೆ  ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ  ತಾಲ್ಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದ ಆಡಿನ ಕಣಿವೆ ಗ್ರಾಮದ ಬಸವಯ್ಯ ಎಂಬ (55) ವರ್ಷದ ವ್ಯಕ್ತಿ ಮೇಕೆಗಳಿಗೆ ಮೇವು ತರಲು ಬೆಳಿಗ್ಗೆ ಜಮೀನಿನ ಕಡೆಗೆ ಹೊಗಿದ್ದು ವಾಪಸ್ ಮನೆಗೆ ಬಂದಿರಲಿಲ್ಲಾ ಇದರಿಂದ. ಗಾಬರಿಯಾದ ಕುಟುಂಬದವರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರು. ಈ ವೇಳೆ

Advertisement

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕುಂದಕೆರೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ವೀರೇಶ್ವರ ಗುಡ್ಡ ಎಂಬ ಅರಣ್ಯದಲ್ಲಿ ಇಂದು ಬಸವಯ್ಯನ ಅರ್ದ ದೇಹ ಪತ್ತೆಯಾಗಿದ್ದು ಹುಲಿಯು ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಇಂತಹ ದಾಳಿಗಳು ಪದೇ ಪದೇ ನಡೆಯುತ್ತಿದೆ.ಕಳೆದ ಒಂದು ವಾರದ ಹಿಂದೆ ಓಂಕಾರ ಅರಣ್ಯವ್ಯಾಪ್ತಿಯ ನಾಗಣಾಪುರಗ್ರಾಮದ ಮಹಿಳೆಯ ಮೇಲಿನದಾಳಿಯನ್ನ ಸ್ಮರಿಸಬಹುದಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಂದಕೆರೆ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಮತ್ತು ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here